Kawasaki Motors (ಭಾರತ) ತನ್ನ ಬಹುನಿರೀಕ್ಷಿತ MY26 Z900 ಬೈಕ್ನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಬೈಕ್ ತಮ್ಮ ಪ್ರಸಿದ್ಧ Z-ಸೀರಿಸ್ ಪರಂಪರೆಯನ್ನು ಮುಂದುವರೆಸುತ್ತಾ ಹೆಚ್ಚು ಆಕರ್ಷಕ ವಿನ್ಯಾಸ ಮತ್ತು ಮಾರ್ಡನ್ ಎಲೆಕ್ಟ್ರಾನಿಕ್ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ Z900 ನಗರರಸ್ತೆಗಳು ಮತ್ತು ಗುಡ್ಡಗಾಡುಗಳಲ್ಲಿ ಸುಗಮ ಸವಾರಿ ನೀಡಲು ವಿನ್ಯಾಸಗೊಳಿಸಲಾಗಿದೆ. 1972 ರಲ್ಲಿ ಆರಂಭವಾದ Z-ಸೀರಿಸ್ ಇಂದು ವಿಶ್ವಾದ್ಯಂತ ಕವಾಸಕಿ ಬೈಕ್‌ಗಳಿಗೆ ಮಾದರಿಯಾಗಿದ್ದು, ಹೊಸ MY26 Z900 ಸುಧಾರಿತ ವಿನ್ಯಾಸ, ಸುಧಾರಿತ ಸಸ್ಪೆನ್ಷನ್ ಮತ್ತು ಆರಾಮದಾಯಕ ವೈಶಿಷ್ಟ್ಯಗಳೊಂದಿಗೆ ಬಂದಿದೆ.
ಈ ಬೈಕ್ 948cc, ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, 4-ಸಿಲಿಂಡರ್ ಎಂಜಿನ್ ಹೊಂದಿದ್ದು, 9,500 rpm ನಲ್ಲಿ 125 ಪಿಎಸ್ ಪವರ್ ಮತ್ತು 7,700 rpm ನಲ್ಲಿ 98.6 Nm ಟಾರ್ಕ್ ನೀಡುತ್ತದೆ. 6-ಸ್ಪೀಡ್ ಗೇರ್ಬಾಕ್ಸ್ ಮತ್ತು ಅಸಿಸ್ಟ್-ಸ್ಲಿಪ್ಪರ್ ಕ್ಲಚ್ ಸಹಾಯದಿಂದ ಸವಾರರಿಗೆ ಉತ್ತಮ ಶಕ್ತಿ ಮತ್ತು ನಿಯಂತ್ರಣ ದೊರೆಯುತ್ತದೆ.
MY26 Z900 ಬೈಕ್ ಸುಧಾರಿತ ಎಲೆಕ್ಟ್ರಾನಿಕ್ ವ್ಯವಸ್ಥೆಗಳೊಂದಿಗೆ ಬರುತ್ತದೆ. ಕ್ವಿಕ್ ಶಿಫ್ಟರ್ (KQS) ಕ್ಲಚ್ ಇಲ್ಲದೆ ಗೇರ್ ಗಳನ್ನು ಬದಲಾಯಿಸಲು ನೆರವಾಗುತ್ತದೆ. ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್ ದೀರ್ಘ ಸವಾರಿಗಳಿಗೆ ವೇಗವನ್ನು ಕಾಪಾಡಲು ಸಹಾಯ ಮಾಡುತ್ತದೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್ RIDEOLOGY THE APP ಮೂಲಕ ಸೌಕರ್ಯವಾಗಿ ಕಾರ್ಯನಿರ್ವಹಿಸುತ್ತದೆ. ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (KTRC), ಕಾರ್ನರಿಂಗ್ ಮ್ಯಾನೇಜ್ಮೆಂಟ್ (KCMF) ಮತ್ತು ಪವರ್ ಮೋಡ್ ವೈಶಿಷ್ಟ್ಯಗಳು ಸುರಕ್ಷತೆ ಮತ್ತು ಸವಾರಿ ಅನುಭವ ಹೆಚ್ಚಿಸುತ್ತವೆ.
ಬೈಕ್ ಎರಡು ಬಣ್ಣಗಳಲ್ಲಿ ಲಭ್ಯ: ಮೆಟಾಲಿಕ್ ಮ್ಯಾಟ್ ಗ್ರ್ಯಾಫೀನ್ ಸ್ಟೀಲ್ ಗ್ರೇ/ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ ಮತ್ತು ಕ್ಯಾಂಡಿ ಲೈಮ್ ಗ್ರೀನ್/ ಮೆಟಾಲಿಕ್ ಕಾರ್ಬನ್ ಗ್ರೇ. ಮುಂಭಾಗದಲ್ಲಿ 41 ಎಂಎಂ ಇನ್ವರ್ಟೆಡ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಗ್ಯಾಸ್-ಆಪರೇಟೆಡ್ ಸಸ್ಪೆನ್ಷನ್ ಇದೆ. ಹಿಂಭಾಗದ ಸಸ್ಪೆನ್ಷನ್ ಪ್ರಯಾಣ 140 ಎಂಎಂ, ಮುಂಭಾಗದ 120 ಎಂಎಂ. ಹೊಸ ಟ್ರಿಪಲ್ ಎಲ್ಇಡಿ ಹೆಡ್ಲೈಟ್ ಮತ್ತು ಎಲ್ಇಡಿ ಟೈಲ್ಲೈಟ್ ಹೊಸ ಲುಕ್ ನೀಡುತ್ತವೆ.
ಹೊಸ MY26 Z900 ಬೈಕ್ ಎಕ್ಸ್‌ಶೋರೂಮ್ ಬೆಲೆ ರೂ. 9,99,000ರಿಂದ ಪ್ರಾರಂಭವಾಗುತ್ತದೆ. ಭಾರತದಲ್ಲಿ ಇದು ಹೆಚ್ಚು ಬೇಡಿಕೆಯಲ್ಲಿದ್ದು, 500 ಸಿಸಿ+ ಶ್ರೇಣಿಯಲ್ಲಿನ ಅತ್ಯಂತ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ.







