
ಬೆಂಗಳೂರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸಿಐ (ACI) ನೀಡುವ 2ನೇ ಹಂತದ ಮಾನ್ಯತೆ ದೊರೆತಿದೆ.
ಏಕೆ ಮಾನ್ಯತೆ ನೀಡಲಾಗಿದೆ
- ವಿಮಾನ ನಿಲ್ದಾಣದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಗಿದೆ
- ಪ್ರಯಾಣಿಕರಿಗೆ ಅನುಕೂಲಕರವಾದ ಸೌಲಭ್ಯಗಳಿವೆ
- ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಸುಗಮ ವ್ಯವಸ್ಥೆ ಮಾಡಲಾಗಿದೆ
- ಈ ಎಲ್ಲ ಕಾರಣಗಳಿಂದ ಎಸಿಐ ಸಂಸ್ಥೆ ಮಾನ್ಯತೆ ನೀಡಿದೆ.
ಈ ಮಾನ್ಯತೆಯನ್ನು ಪಡೆದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಪಾತ್ರವಾಗಿದೆ.
ಎಸಿಐ ಸಂಸ್ಥೆ ವಿಮಾನ ನಿಲ್ದಾಣದ ಸೇವೆ, ನಿಯಮ ಹಾಗೂ ಪ್ರಯಾಣಿಕರ ಅಭಿಪ್ರಾಯವನ್ನು ಪರಿಶೀಲಿಸಿ ಮಾನ್ಯತೆ ನೀಡುತ್ತದೆ.
“ಪ್ರತಿ ಪ್ರಯಾಣಿಕರಿಗೂ ಸುಗಮ ಮತ್ತು ಸ್ಮರಣೀಯ ಅನುಭವ ನೀಡುವುದು ನಮ್ಮ ಗುರಿ. ಈ ಸಾಧನೆ ನಮ್ಮ ತಂಡದ ಶ್ರಮದ ಫಲ” ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ಮುಖ್ಯಸ್ಥ ಸತ್ಯಕಿ ರಘುನಾಥ್ ತಿಳಿಸಿದ್ದಾರೆ.
- ಹುಬ್ಬಳ್ಳಿ ವಿಮಾನ ನಿಲ್ದಾಣ – ಸೌರಶಕ್ತಿ ಮಾದರಿ
- ಹುಬ್ಬಳ್ಳಿ ವಿಮಾನ ನಿಲ್ದಾಣವು ಸೌರಶಕ್ತಿಯಲ್ಲಿ ಸ್ವಾವಲಂಬಿ ಆಗಿದೆ.
- ಅಳವಡಿಸಿದ ಸೋಲಾರ್ ಪ್ಲಾಂಟ್ ಮೂಲಕ ಪ್ರತಿದಿನ 8 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
- ಇದು ದೇಶದ ವಿಮಾನ ನಿಲ್ದಾಣಗಳಲ್ಲಿ ಮೊದಲನೆಯದು.
- ಈ ಸೌರ ಘಟಕವನ್ನು 2022ರಲ್ಲಿ ಸ್ಥಾಪಿಸಲಾಯಿತು.