back to top
26.3 C
Bengaluru
Wednesday, October 29, 2025
HomeBusinessKempegowda Airport Terminal-2ಗೆ Skytrax 5 ಸ್ಟಾರ್ ಗೌರವ

Kempegowda Airport Terminal-2ಗೆ Skytrax 5 ಸ್ಟಾರ್ ಗೌರವ

- Advertisement -
- Advertisement -

Bengaluru: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ಗೆ (Kempegowda International Airport Terminal 2 awarded) ಜಾಗತಿಕವಾಗಿ ಪ್ರಸಿದ್ಧಿ ಪಡೆದ ಸ್ಕೈಟ್ರಾಕ್ಸ್ ಸಂಸ್ಥೆಯ 5 ಸ್ಟಾರ್ ಮಾನ್ಯತೆ ಲಭಿಸಿದ್ದು, ಈ ಗೌರವ ಪಡೆದ ಭಾರತದ ಮೊದಲ ಟರ್ಮಿನಲ್ ಆಗಿದೆ.

ಈ ಮಾನ್ಯತೆ ಸ್ಕೈಟ್ರಾಕ್ಸ್ ಸಂಸ್ಥೆಯ ಗಂಭೀರ ಮಾನದಂಡಗಳ ಆಧಾರದ ಮೇಲೆ ನೀಡಲಾಗಿದೆ. ಟರ್ಮಿನಲ್ ವಿನ್ಯಾಸ, ಸ್ವಚ್ಛತೆ, ಭದ್ರತೆ, ಡಿಜಿಟಲ್ ತಂತ್ರಜ್ಞಾನ, ಆತಿಥ್ಯ, ಸುಲಭ ಪ್ರವೇಶ, ಪರಿಸರ ಸ್ನೇಹಿ ಕ್ರಮಗಳು ಮುಂತಾದ 30ಕ್ಕೂ ಹೆಚ್ಚು ವಿಭಾಗಗಳಲ್ಲಿ 800ಕ್ಕೂ ಹೆಚ್ಚು ಪ್ರಯಾಣಿಕರ ಅಭಿಪ್ರಾಯದ ಆಧಾರದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ಇದಕ್ಕೆ ಜೊತೆಯಾಗಿಯೇ, ಭಾರತ ಹಾಗೂ ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಗೌರವವನ್ನು ಕೆಂಪೇಗೌಡ ನಿಲ್ದಾಣವು ಎರಡನೇ ಬಾರಿಗೆ ಗಳಿಸಿದೆ.

ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸಲು ಟರ್ಮಿನಲ್-2 ನಿರಂತರ ಪ್ರಯತ್ನಿಸುತ್ತಿದೆ ಹಾಗೂ ಸೇವೆಗಳ ಗುಣಮಟ್ಟ ಮತ್ತು ಸೌಲಭ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page