Kerur, Bagalkote : ಸಂಘದ ಸಭಾಭವನದಲ್ಲಿ ನಡೆದ ಮರ್ಚಂಟ್ಸ್ ಬ್ಯಾಂಕ್ (Merchants Bank) ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಧಜಂಜಯ ಕಂದಕೂರ Covid-19 ಸಂಕಷ್ಟದ ನಡುವೆಯೂ ಬ್ಯಾಂಕ್ ₹67.65 ಲಕ್ಷ ಲಾಭಾಂಶ ಗಳಿಸಿದೆ. ಸಂಘದಲ್ಲಿ 3,591 ಸದಸ್ಯರಿಂದ 47.95 ಲಕ್ಷ ಷೇರು ಸಂಗ್ರಹಿಸಿ ₹27.90 ಕೋಟಿ ಠೇವುಗಳನ್ನು ಠೇವಣಿದಾರರ ಹಿತಾಸಕ್ತಿಗೆ ಬದ್ಧವಾಗಿ ಕ್ರೋಡೀಕರಿಸಿದ್ದೇವೆ. ಸದಸ್ಯರಿಗೆ ₹19.28 ಕೋಟಿ ಸಾಲ ವಿತರಿಸಿದ್ದು, ಆರ್ಥಿಕ ವಹಿವಾಟು ವೃದ್ಧಿಗೆ ಒತ್ತು ನೀಡಲಾಗಿದ್ದು ಕೆರೂರ ಪಟ್ಟಣದ ಮರ್ಚಂಟ್ಸ್ ಬ್ಯಾಂಕ್ 26 ವರ್ಷಗಳ ಸಾರ್ಥಕ ವಹಿವಾಟಿನಲ್ಲಿ ಆರ್ಥಿಕ ಪ್ರಗತಿಯೊಂದಿಗೆ ಮುನ್ನಡೆದಿದೆ ಎಂದು ಹೇಳಿದರು.
ನಿರ್ದೇಶಕ ಜಗದೀಶ ಯಂಡಿಗೇರಿ, ವ್ಯವಸ್ಥಾಪಕ ಆರ್.ಎಸ್. ಅಳಗವಾಡಿ, ನಿರ್ದೇಶಕ ಎಸ್.ವಿ. ರಾಮದುರ್ಗ, ಸುಭಾಸ ಪೂಜಾರ, ಶಂಕ್ರಪ್ಪ ಘಟ್ಟದ, ಕೇಶವ ಕಂದಕೂರ, ಗುರಪ್ಪ ಬಾಗೋಜಿ, ತಾರಾ ಹಂದ್ರಾಳ, ರತ್ನವ್ವಾ ಕಡಕೋಳ, ದಾನಪ್ಪ ಪೂಜಾರ, ಪ್ರವೀಣ ಮಾನ್ವಿ, ಪ್ರಕಾಶ ಮೇದಾರ, ಸಿಬ್ಬಂದಿ ಮತ್ತಿತರಿದ್ದರು.

 
                                    