K.G.F. (Kolar Gold Fields), Kolar : ಕೆ.ಜಿ.ಎಫ್ ನ ಚಾಂಪಿಯನ್ ರೀಫ್ಸ್‌ನ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು (Police Annual Sports) ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕೆ.ಆರ್. ನಾಗರಾಜ್ ಉದ್ಘಾಟಿಸಿದರು.
ಸಮಾಜವನ್ನು ರಕ್ಷಿಸುವ ಪೊಲೀಸರು ಆರೋಗ್ಯಕರವಾಗಿರಬೇಕು, ದೈಹಿಕ ಸಾಮರ್ಥ್ಯ ಕಾಪಾಡಿಕೊಂಡು ಕೆಲಸ ಮಾಡಿದರೆ ಸಮಾಜವು ನಮ್ಮಿಂದ ಏನನ್ನು ನಿರೀಕ್ಷಿಸುತ್ತದೆಯೋ ಅದನ್ನು ನೀಡಿ ಸಮಾಜದ ಹಿತ ಕಾಪಾಡಬಹುದು. ಮನಸ್ಸು ಮತ್ತು ದೇಹ ಚೆನ್ನಾಗಿದ್ದರೆ ಕ್ರಿಯಾಶೀಲ ಮತ್ತು ಆರೋಗ್ಯಕರ ಜೀವನ ನಡೆಸಬಹುದು. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರುವ ಪೊಲೀಸ್ ಸಿಬ್ಬಂದಿಯಿಂದ ಮಾತ್ರ ಕ್ರಿಯಾಶೀಲರಾಗಿ ಕಾನೂನ ಕಾಪಾಡಲು ಸಾಧ್ಯ. ಅಭಿವೃದ್ಧಿ ಪಥದಲ್ಲಿ ದೇಶ ಮುಂದುವರಿಯಲು ಪೋಲೀಸರ ಪಾತ್ರ ದೊಡ್ಡದ್ದು. ಕಾನೂನನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಪೊಲೀಸರಿಗೆ ಕಾನೂನು ಉಲ್ಲಂಘನೆ ಮಾಡಿದವರನ್ನು ಶಿಕ್ಷಿಸುವುದು, ನೊಂದವರನ್ನು ರಕ್ಷಿಸುವುದು ಆದ್ಯ ಕರ್ತವ್ಯವಾಗಿದೆ. ಎಂದು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಕೆ.ಆರ್. ನಾಗರಾಜ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ಡಿವೈಎಸ್‌ಪಿ ಮುರಳೀಧರ ಮತಿತ್ತರರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.