Hubballi: ಸ್ವಾತಂತ್ರ್ಯೋತ್ಸವ ಬಂದಾಗಲೆಲ್ಲ ಹುಬ್ಬಳ್ಳಿಯ ಬೆಂಗೇರಿಯ ಖಾದಿ ತ್ರಿವರ್ಣ ಧ್ವಜ ತಯಾರಿಕಾ ಘಟಕದಲ್ಲಿ ಕೆಲಸದ ರಭಸ ಹೆಚ್ಚಿರುತ್ತಿತ್ತು. ಮಹಿಳಾ ಕಾರ್ಮಿಕರು ದಿನರಾತ್ರಿ ರಾಷ್ಟ್ರಧ್ವಜ ಹೊಲಿಯುವಲ್ಲಿ ತೊಡಗಿರುತ್ತಿದ್ದರು. ಆದರೆ ಈ ಬಾರಿ ಉತ್ಸಾಹ ಕಾಣಿಸದೇ, ಕಾರ್ಮಿಕರ ಸಂಖ್ಯೆಯೂ ಕಡಿಮೆಯಾಗಿದೆ.
ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಲಾಭದಲ್ಲಿ ಶೇ.75ರಷ್ಟು ಕುಸಿತ ಕಂಡುಬಂದಿದೆ. ಹಿಂದಿನ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಸುಮಾರು ₹2.7 ಕೋಟಿ ರೂ. ಮೌಲ್ಯದ ಆರ್ಡರ್ ಇದ್ದರೆ, ಈ ಬಾರಿ ಕೇವಲ ₹49 ಲಕ್ಷ ರೂ. ಮೌಲ್ಯದ ಆರ್ಡರ್ ಮಾತ್ರ ಬಂದಿದೆ.
ಬೇಡಿಕೆ ಇಳಿಕೆಗೆ ಕಾರಣಗಳು
- ಕೇಂದ್ರ ಸರ್ಕಾರ ಪಾಲಿಸ್ಟರ್ ಧ್ವಜಗಳ ಬಳಕೆಗೆ ಅನುಮತಿ ನೀಡಿದ ಬಳಿಕ ಖಾದಿ ಧ್ವಜ ಬೇಡಿಕೆ ಕುಸಿತ.
- ಪಾಲಿಸ್ಟರ್ ಧ್ವಜಗಳನ್ನು ಉತ್ಪಾದಿಸುವ ಕಂಪನಿಗಳು ಮಾರುಕಟ್ಟೆಯನ್ನು ವಶಪಡಿಸಿಕೊಂಡಿವೆ.
- ಖಾದಿ ಧ್ವಜಗಳ ಬೆಲೆ ಹೆಚ್ಚು ಇರುವುದರಿಂದ ಜನ ದೂರವಾಗುತ್ತಿದ್ದಾರೆ.
- ಅನೇಕ ಸರ್ಕಾರಿ ಕಟ್ಟಡಗಳು ಹಾಗೂ ಸಂಸ್ಥೆಗಳು ಪಾಲಿಸ್ಟರ್ ಧ್ವಜಗಳನ್ನೇ ಬಳಸಲು ಆರಂಭಿಸಿವೆ.
ಸಂಘವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವದಂದು ಕಡ್ಡಾಯವಾಗಿ ಖಾದಿ ಧ್ವಜಗಳನ್ನು ಹಾರಿಸುವಂತೆ ಒತ್ತಾಯಿಸಿದೆ.
ಆರ್ಡರ್‌ಗಳ ಕೊರತೆಯಿಂದ ಈ ಬಾರಿ ಅನೇಕ ಮಹಿಳಾ ಕಾರ್ಮಿಕರಿಗೆ ಕೆಲಸ ಸಿಗದೆ ಹೋಗಿದೆ. ಸ್ಥಿತಿ ಮುಂದುವರಿದರೆ ಖಾದಿಯನ್ನು ಜನಪ್ರಿಯಗೊಳಿಸುವ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಂಗೇರಿ ಘಟಕವು ಧ್ವಜಗಳ ಜೊತೆಗೆ ಚೀಲಗಳು, ಉಡುಪುಗಳು, ಬೆಡ್ಸ್ಪ್ರೆಡ್ ಗಳಂತಹ ಖಾದಿ ವಸ್ತುಗಳನ್ನೂ ತಯಾರಿಸುತ್ತದೆ.