Bengaluru: ಖರ್ಗೆ (Kharge) ಅವರು ರಾಜ್ಯ ರಾಜಕಾರಣಕ್ಕೆ ಬರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗೃಹ ಸಚಿವ ಡಾ. ಜಿ. (G. Parameshwar) ಪರಮೇಶ್ವರ್ ಹೇಳಿದರು. ಅವರು ಕಾಂಗ್ರೆಸ್ ಪಕ್ಷದಲ್ಲಿ ಮತ್ತು ರಾಷ್ಟ್ರರಾಜಕಾರಣದಲ್ಲೂ ಹಿರಿಯ ನಾಯಕ. ರಾಜ್ಯ ರಾಜಕಾರಣಕ್ಕೆ ಅವರು ಬರುವ ನಿರ್ಧಾರವನ್ನು ತಪ್ಪಾಗಿ ಅರಥೈಸಬಾರದು ಎಂದರು.
- ಎಐಸಿಸಿ ಅಧ್ಯಕ್ಷರು ಮುಖ್ಯಮಂತ್ರಿ ಆಯ್ಕೆಗೆ ತೀರ್ಮಾನಿಸುತ್ತಾರೆ.
- ಖರ್ಗೆ ಅವರ ಹೇಳಿಕೆಗೆ ಟೀಕೆ ಮಾಡುವುದು ಸರಿಯಲ್ಲ.
- ಅವರ ಅನುಭವದಿಂದ ರಾಜ್ಯಕ್ಕೆ ಲಾಭವಾಗಬಹುದು.
ವಿಕಾಸ ಸಭೆಗಳ ಕುರಿತು: ಮುಖ್ಯಮಂತ್ರಿ ಅವರು ಶಾಸಕರೊಂದಿಗೆ ಜಿಲ್ಲಾವಾರು ಸಭೆಗಳನ್ನು ನಡೆಸಲಿದ್ದಾರೆ. ಪ್ರತಿ ಶಾಸಕರಿಗೆ ₹50 ಕೋಟಿ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಈ ಸಭೆಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನೆಯ ಕುರಿತಾಗಿ ಚರ್ಚೆ ನಡೆಯಲಿದೆ. ಈ ರೀತಿಯ ಸಭೆಗಳು ಹಿಂದೆ 2013-2018 ರಲ್ಲಿಯೂ ನಡೆದಿದ್ದವು.
ರಮ್ಯಾ ವಿಚಾರ: ನಟಿ ರಮ್ಯಾ ಅವರ ಕುರಿತು ನಡೆದ ವಿಷಯ ಗಂಭೀರವಾಗಿದೆ. ಇಂತಹ ಘಟನೆಗಳು ಮತ್ತೆ ನಡೆಯಬಾರದು. ಅಗತ್ಯ ಕ್ರಮಗಳನ್ನು ಪೊಲೀಸ್ ಆಯುಕ್ತರು ಕೈಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಕಾಲ್ತುಳಿತ ಪ್ರಕರಣ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಮೈಕೆಲ್ ಡಿ. ಕುನ್ಹಾ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಲಾಗಿದೆ. ಕೆಲ ಅಧಿಕಾರಿ ಸಿಎಟಿ (CAT)ಗೆ ಹೋದ ಕಾರಣ ವಿಚಾರಣೆಗೆ ವಿಳಂಬವಾಗಿದೆ. ಅಮಾನತು ಹಿಂಪಡೆಯಲಾಗಿದೆ ಹಾಗೂ ವಿಚಾರಣೆ ಮುಂದುವರಿಯಲಿದೆ.
ಬಿ. ದಯಾನಂದ್ ಹುದ್ದೆ ಕುರಿತು: ದಯಾನಂದ್ ಅವರಿಗೆ ಮತ್ತೆ ಕಮಿಷನರ್ ಹುದ್ದೆ ನೀಡಲಾಗುವುದಿಲ್ಲ. ಆದರೆ ಅವರ ಸೇವಾ ಹುದ್ದೆಗೆ ಸಮಾನ ಸ್ಥಾನಮಾನದ ಹುದ್ದೆ ನೀಡಲಾಗುವುದು.
ಗೊಬ್ಬರ ಸಮಸ್ಯೆ: ಗೊಬ್ಬರಕ್ಕಾಗಿ ಹೆಚ್ಚು ಹಣ ಕೇಳಿ ಕಾಳಸಂತೆಗಳಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿ ಮತ್ತು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಉತ್ತಮ ಮುಂಗಾರು ಕಾರಣದಿಂದ ಕೃಷಿ ಚಟುವಟಿಕೆ ಹೆಚ್ಚಿದ್ದು, ಗೊಬ್ಬರದ ಬೇಡಿಕೆಯೂ ಏರಿದೆ. ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣ: ಧರ್ಮಸ್ಥಳ ಪ್ರಕರಣದ ತನಿಖೆ ಎಸ್ಐಟಿ ಮೂಲಕ ಮುಂದುವರಿಯುತ್ತದೆ. ತನಿಖೆ ನಡುವೆ ಯಾರು ಏನೇ ಹೇಳಿಕೆ ನೀಡಬಾರದು ಎಂದು ಸ್ಪಷ್ಟಪಡಿಸಿದರು.
ಪರಮೇಶ್ವರ್ ಅವರು ತಮ್ಮ ಕ್ಷೇತ್ರದ ಶಾಸಕರೊಂದಿಗೆ ಸಂಜೆ 5 ಗಂಟೆಗೆ ಸಭೆ ನಡೆಸಲಿದ್ದಾರೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು.







