Gadag: ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರು, “ಈ ವಿಷಯವಾಗಿ ಬಾಯಿ ಮುಚ್ಚಿಕೊಂಡು ಇರಬೇಕು” ಎಂದು ರಾಜ್ಯದ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು.
ಗದಗ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಖರ್ಗೆ ಸಾಹೇಬ್ರು ಬಾಯಿ ಮುಚ್ಚಿಕೊಳ್ಳಿ ಎಂದು ಹೇಳಿದ್ದಾರೆ. ನನಗೆ ಇನ್ನೇನು ಗೊತ್ತಿಲ್ಲ. ಈ ವಿಷಯದಲ್ಲಿ ನನಗೆ ಪ್ರಶ್ನೆ ಕೇಳಬೇಡಿ” ಎಂದು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ. ಮಧು ಬಂಗಾರಪ್ಪ ಆಕ್ರೋಶ ಬಿಜೆಪಿ ನಾಯಕರು “ಕಾಂಗ್ರೆಸ್ ನೀಡಿದ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ” ಎಂದು ಹೇಳುತ್ತಿರುವ ಬಗ್ಗೆ ಮಧು ಬಂಗಾರಪ್ಪ ತೀವ್ರವಾಗಿ ಪ್ರತಿಕ್ರಿಯಿಸಿದರು.
“ಮೂರು ವರ್ಷಗಳಿಂದ ಬಿಜೆಪಿಯವರಿಗೆ ಬೇರೆ ಕೆಲಸವೇ ಇಲ್ಲ. ಮೊದಲು ಗ್ಯಾರಂಟಿ ವಿರುದ್ಧ ಮಾತನಾಡುತ್ತಿದ್ದರು, ಈಗ ಜನರ ಬೆಂಬಲ ನೋಡಿ ನಾವು ವಿರೋಧಿಗಳಲ್ಲ ಎನ್ನುತ್ತಿದ್ದಾರೆ. ಜನರು ಪ್ರತಿಕ್ರಿಯೆ ನೀಡಿದಾಗ ಅರ್ಥವಾಗುತ್ತದೆ!” ಎಂದು ವಾಗ್ದಾಳಿ ನಡೆಸಿದರು.
ನಮ್ಮ ಶಾಸಕರು ಗ್ಯಾರಂಟಿಗೆ ವಿರೋಧಿಗಳಲ್ಲ, ಮಧು ಬಂಗಾರಪ್ಪ ಸ್ಪಷ್ಟನೆ. ಶಾಸಕ ಬಸವರಾಜ ರಾಯರೆಡ್ಡಿಯು “ರಸ್ತೆ ಬೇಕಾದರೆ ಗ್ಯಾರಂಟಿ ನಿಲ್ಲುತ್ತದೆ” ಎಂಬ ಮಾತುಗಳನ್ನು ಕೆಲ ಮಾಧ್ಯಮಗಳು ವರದಿ ಮಾಡಿದ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, “ನಮ್ಮ ಶಾಸಕರು ಗ್ಯಾರಂಟಿಗೆ ವಿರೋಧಿಸುತ್ತಿಲ್ಲ. ನಾವು ಹೇಳಿದ್ದು ಬೇರೆ, ಮಾಧ್ಯಮಗಳು ಬರೆದಿದ್ದು ಬೇರೆ” ಎಂದು ಹೇಳಿದರು.
ಐದು ವರ್ಷ ಗ್ಯಾರಂಟಿ ಯೋಜನೆ ಮುಂದುವರಿಯುತ್ತದೆ. ಮಧು ಬಂಗಾರಪ್ಪ ವಿಶ್ವಾಸ. “ಯಾರು ಏನೇ ಟೀಕೆ ಮಾಡಿದರೂ, ಗ್ಯಾರಂಟಿ ಯೋಜನೆ ಐದು ವರ್ಷ ನಿಲ್ಲುತ್ತದೆ. ನಾನು ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿ ಈ ಯೋಜನೆ ರೂಪಿಸುವಲ್ಲಿ ಭಾಗವಹಿಸಿದ್ದೇನೆ. ಅದು ನನಗೆ ಹೆಮ್ಮೆಯ ವಿಷಯ” ಎಂದು ಹೇಳಿದರು.
RSS ಸಂಘದ ನಿಷೇಧದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಯನ್ನು ಪರೋಕ್ಷವಾಗಿ ಬೆಂಬಲಿಸಿದ ಮಧು ಬಂಗಾರಪ್ಪ, “ಯಾರಾದರೂ ಸಂವಿಧಾನ ವಿರೋಧಿಯಾಗಿ ವರ್ತಿಸಿದರೆ, ಅವರನ್ನು ನಿಷೇಧಿಸುವುದು ಸರಿಯೇ ಆಗುತ್ತದೆ” ಎಂದು ಹೇಳಿದರು.