ದಕ್ಷಿಣ ಕೊರಿಯಾದ ಪ್ರಸಿದ್ಧ ಕಾರು ತಯಾರಕ ಕಂಪನಿ ಕಿಯಾ, ತನ್ನ ಹೊಸ ಎಲೆಕ್ಟ್ರಿಕ್ ಕಾರು ಕ್ಯಾರೆನ್ಸ್ ಕ್ಲಾವಿಸ್ EV (Carens Clavis EV) ಅನ್ನು ಭಾರತದಲ್ಲಿ ಪರಿಚಯಿಸಿದೆ. ಇದು ಮಧ್ಯಮ ವರ್ಗದ ಎರಡು ಸಣ್ಣ ಕುಟುಂಬಗಳು ಸುಲಭವಾಗಿ ಪ್ರಯಾಣಿಸಬಹುದಾದ ಎಲೆಕ್ಟ್ರಿಕ್ MPV ಆಗಿದ್ದು, ಜನರ ಗಮನ ಸೆಳೆಯುತ್ತಿದೆ.
ಭಾರತದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಕಿಯಾ ಈಗ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದೆ. ಅದರ ಭಾಗವಾಗಿಯೇ, ಈಗ ಕ್ಯಾರೆನ್ಸ್ ಕ್ಲಾವಿಸ್ EV ಕಾರು ಜುಲೈ 22ರಿಂದ ಬುಕ್ಕಿಂಗ್‌ಗಾಗಿ ಲಭ್ಯವಿರಲಿದೆ. ಇದರ ಆರಂಭಿಕ ಬೆಲೆ ರೂ. 17.99 ಲಕ್ಷ (ಎಕ್ಸ್-ಶೋರೂಂ) ಆಗಿದ್ದು, ಆನ್-ರೋಡ್ ಬೆಲೆ ಸ್ವಲ್ಪ ಹೆಚ್ಚು ಇರಬಹುದು.
- ಈ ಕಾರು ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ
- 42 kWh ಬ್ಯಾಟರಿ ಪ್ಯಾಕ್ – 404 ಕಿಮೀ ರೇಂಜ್ (ARAI ಪ್ರಕಾರ)
- 51.4 kWh ಬ್ಯಾಟರಿ ಪ್ಯಾಕ್ – 490 ಕಿಮೀ ರೇಂಜ್
- ಪವರ್ಟ್ರೇನ್ನಲ್ಲಿ ಕೂಡ ಎರಡು ಆಯ್ಕೆಗಳು
- 99 kW ಮೋಟಾರ್
- 126 kW ಮೋಟಾರ್
ಇವು HTK Plus, HTX ಮತ್ತು HTX Plus ಎಂಬ ಮೂರು ವಿಭಿನ್ನ ಮಾದರಿಗಳಲ್ಲಿ ಬರುತ್ತದೆ. ಕಾರು 7 ಸೀಟರ್ ಇರುವುದರಿಂದ ಸೌಕರ್ಯವಾಗಿ ಪ್ರಯಾಣಿಸಬಹುದು.
ಇನ್ನು ಒಳಗಿನ ವೈಶಿಷ್ಟ್ಯ
- 26.62 ಇಂಚಿನ ಡ್ಯುಯಲ್ ಪನೋರಾಮಿಕ್ ಡಿಸ್ಪ್ಲೇ
- ಬೋಸ್ 8 ಸ್ಪೀಕರ್ ಸೌಂಡ್ ಸಿಸ್ಟಮ್
- 64 ಕಲರ್ ಆಂಬಿಯೆಂಟ್ ಲೈಟಿಂಗ್
- ತೇಲುವ ಸೆಂಟರ್ ಕನ್ಸೋಲ್
- ಫ್ರಂಟ್ ಸೀಟ್ಸ್‌ನಲ್ಲಿ ವೆಂಟಿಲೇಶನ್
- ಏರ್ ಪ್ಯೂರಿಫೈಯರ್
ಒಟ್ಟಿನಲ್ಲಿ, ಕ್ಯಾರೆನ್ಸ್ ಕ್ಲಾವಿಸ್ EV ಕೈಗೆಟುಕುವ ಬೆಲೆಯಲ್ಲಿ, ಶ್ರೇಣಿಯ ವೈಶಿಷ್ಟ್ಯಗಳೊಂದಿಗೆ, ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲು ಸಜ್ಜಾಗಿದೆ.