ದಕ್ಷಿಣ ಕೊರಿಯಾ (South Korean) ಮೂಲದ ಕಿಯಾ (Kia) ಕಾರು ತಯಾರಕ ಕಂಪನಿಯು 2019ರಲ್ಲಿ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶ ಮಾಡಿತು. ಈ ಕಂಪನಿಯು ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದ್ದು, ಇದೀಗ ಹೊಸ ಕಿಯಾ ಸೈರಸ್ (Kia Syros SUV) ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಕಾರಿನ ಅನಾವರಣ 19 ಡಿಸೆಂಬರ್ 2024 ರಂದು ನಡೆಯಲಿದ್ದು, ನಂತರದ ದಿನಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತದೆ.
ವೈಶಿಷ್ಟ್ಯಗಳು (Features)
- ವಿನ್ಯಾಸ (Design): ಹೊಸ ಕಿಯಾ ಸೈರಸ್ SUVಯ ಹೊರಭಾಗ ಆಕರ್ಷಕ ವಿನ್ಯಾಸದಲ್ಲಿ ಇರಲಿದೆ. ಈ ಕಾರು ಎಲ್ಈಡಿ ಹೆಡ್ಲೈಟ್ಸ್, ಡಿಆರ್ಎಲ್ಸ್, ಟೈಲ್ಲ್ಯಾಂಪ್ಸ್, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್ಸ್ ಮತ್ತು ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿರಬಹುದು ಎನ್ನಲಾಗಿದೆ.
- ಕಾರ್ಯಕ್ಷಮತೆ (Performance): ಈ ಕಾರಿನಲ್ಲಿ 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್, 1.0-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಬಹುದು. 5-ಸ್ಪೀಡ್ ಮ್ಯಾನುಯಲ್ ಅಥವಾ ಆಟೋಮೆಟಿಕ್ ಗೇರ್‌ಬಾಕ್ಸ್‌ಗಳನ್ನು ಪಡೆದಿರಬಹುದು ಎನ್ನಲಾಗಿದೆ.
- ಈ ಕಾರಿನಲ್ಲಿ 10.25-ಇಂಚು ಡುಯಲ್ ಸ್ಕ್ರೀನ್ ಇನ್ಫೋಟೈನೆಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹಲವು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರಬಹುದು.
- ಸುರಕ್ಷತಾ ವೈಶಿಷ್ಟ್ಯಗಳು (Safety Features): 6 ಏರ್ಬ್ಯಾಗ್‌ಗಳು, ABS, EBD, ಟಿಪಿಎಂಎಸ್, ರೇರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಸೀಟ್ಬೆಲ್ಟ್ ರಿಮೈಂಡರ್‌ಗಳನ್ನು ಹೊಂದಿರುವ ಸಾಧ್ಯತೆ ಇದೆ.
- ಬೆಲೆ ಮತ್ತು ಆಸನ ಆಯ್ಕೆ (Price & Seating Capacity): ಈ ಕಾರು ರೂ. 6 ಲಕ್ಷದಿಂದ ರೂ. 10 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಲಭ್ಯವಿರಬಹುದು. 5/7 ಆಸನ ಆಯ್ಕೆಗಳನ್ನು ಒಳಗೊಂಡಿರಬಹುದು.
ಈ ಹೊಸ ಕಿಯಾ ಸೈರಸ್ SUV ಗ್ರಾಹಕರಿಂದ ಹೆಚ್ಚಿನ ಆಸಕ್ತಿ ಹಾಗೂ ಪ್ರತಿಕ್ರಿಯೆಗಳನ್ನು ಪಡೆದಿದ್ದು, ಬಿಡುಗಡೆ ನಂತರ ಗ್ರಾಹಕರ ಪ್ರತಿಕ್ರಿಯೆಗಳು ಹೇಗೆ ಇರುತ್ತವೆ ಎಂಬುದನ್ನು ನೋಡಬೇಕಾಗಿದೆ.