Home Karnataka Kolar ಕಾಡಹಳ್ಳಿ BMC ಕೇಂದ್ರ ಉದ್ಘಾಟನೆ

ಕಾಡಹಳ್ಳಿ BMC ಕೇಂದ್ರ ಉದ್ಘಾಟನೆ

Kolar Kochimul BMC Centre

Kolar : ಕೋಲಾರ ತಾಲ್ಲೂಕಿನ ಕಾಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಿರ್ಮಿಸಿರುವ ನೂತನ BMC ಕೇಂದ್ರವನ್ನು ಗುರುವಾರ ಒಕ್ಕೂಟದ ನಿರ್ದೇಶಕ ಡಿ.ವಿ.ಹರೀಶ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಒಕ್ಕೂಟದ ನಿರ್ದೇಶಕ ಡಿ.ವಿ.ಹರೀಶ್ “ರಾಜಕೀಯ ಇಚ್ಛಾಶಕ್ತಿಯಿಂದ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (KOCHIMUL) ವಿಭಜನೆಗೊಂಡಿದ್ದು, ರಾಜಕೀಯ ಲಾಭಕ್ಕೆ ಅವಳಿ ಜಿಲ್ಲೆಯ ರೈತರ ಹಿತ ಬಲಿ ಕೊಡಬಾರದು. ರೈತರು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು.ಅಭಿವೃದ್ಧಿ ವಿಚಾರದಲ್ಲಿ ಪಕ್ಷಪಾತ ಮಾಡದೆ ಒಕ್ಕೂಟದಿಂದ ಸಂಘಗಳಿಗೆ ಸೌಕರ್ಯ ಕಲ್ಪಿಸಲು ಸಹಕರಿಸುತ್ತೇನೆ. ಸಹಕಾರ ಸಂಘ ಇಲ್ಲದ ಗ್ರಾಮ ಗುರುತಿಸಿ ಸಂಘ ಸ್ಥಾಪನೆಗೆ ಒತ್ತು ನೀಡಿ ಮಹಿಳಾ ಸಂಘಗಳ ಸ್ಥಾಪನೆಗೂ ಆದ್ಯತೆ ಕೊಡುತ್ತೇವೆ. ಮಹಿಳೆಯರು, ರೈತರ ಸಬಲೀಕರಣಕ್ಕೆ DCC Bank ನಿಂದ ಶೂನ್ಯ ಬಡ್ಡಿ ಸಾಲ ನೀಡಲಾಗುತ್ತಿದ್ದು , ಇದರ ಸದುಪಯೋಗವನ್ನು ರೈತ ಬಾಂದವರು ಪಡೆಯಬೇಕು” ಎಂದು ಹೇಳಿದರು.

ಕೋಚಿಮುಲ್‌ ಶಿಬಿರ ವ್ಯವಸ್ಥಾಪಕ ಡಾ.ಶ್ರೀನಿವಾಸಗೌಡ, ಕಾಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಾನರಾಸಪ್ಪ, ಉಪಾಧ್ಯಕ್ಷ ದೇವರಾಜ್, ನಿರ್ದೇಶಕರಾದ ಕೆ.ಎಸ್.ರಾಮರೆಡ್ಡಿ, ಬಾಲರಾಜ, ಕೆ.ವಿ.ಮಂಜುನಾಥ್, ಕೆ.ಆರ್.ಮಂಜುನಾಥ್, ಕೆ.ವಿ.ರಾಮದಾಸ್, ಕೆ.ಶ್ರೀನಿವಾಸ್, ಸರಸ್ವತಮ್ಮ, ನಂದೀಶಮ್ಮ, ಶಿಬಿರ ಕಚೇರಿ ಪ್ರಭಾರಿ ಉಪ ವ್ಯವಸ್ಥಾಪಕ ಡಾ.ಆರ್.ಮಹೇಶ್, ತಾಂತ್ರಿಕ ಅಧಿಕಾರಿ ತಿಪ್ಪಾರೆಡ್ಡಿ, ಗ್ರಾ.ಪಂ ಅಧ್ಯಕ್ಷೆ ವನಿತಾ, ಸದಸ್ಯರಾದ ವೆಂಕಟಲಕ್ಷ್ಮಮ್ಮ, ಕೆ.ಎನ್.ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version