Kolar : ನೂತನ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (Superintendent of Police) ಶ್ರೀ ಡಿ.ದೇವರಾಜ್ IPS ರವರು ಸೋಮವಾರ ಅಧಿಕಾರ ವಹಿಸಿಕೊಂಡರು. ಡಿ.ದೇವರಾಜ್ ರವರು ಈ ಹಿಂದೆ ಬೆಂಗಳೂರು ನಗರ ವೈಟ್‌ಫೀಲ್ಡ್ (Bengalore Whitefield) ವಲಯದ ಡಿ.ಸಿ.ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೇಕ ಪ್ರಕರಣಗಳ್ಳನ್ನು ಯಶಶ್ವಿಯಾಗಿ ಭೇದಿಸಿದ್ದ ಡಿ.ದೇವರಾಜ್, ಐ.ಪಿ.ಎಸ್ ರವರು ಕರೋನ ಸಂಕಷ್ಟ ಸಮಯದಲ್ಲಿ NGO ಗಳ ಸಹಕಾರದೊಂದಿಗೆ 5000 ಊಟದ ಪ್ಯಾಕೆಟ್ ಗಳನ್ನು ಬಡ ಕೂಲಿ ಕಾರ್ಮಿಕರಿಗೆ ಹಂಚಿದ್ದರು.