Narasapura, Kolar : ಕೋವಿಡ್ ಸೋಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರ ವಾರಾಂತ್ಯದಲ್ಲಿ ಕರ್ಫ್ಯೂ (Weekend Curfew) ಘೋಷಣೆ ಮಾಡಿದ್ದು, ಜಿಲ್ಲೆಯಲ್ಲಿ ಶನಿವಾರ ಜನರಿಂದ ಉತ್ತಮ ಬೆಂಬಲ ಸಿಕ್ಕಿತ್ತು. ಆದರೆಭಾನುವಾರ ನರಸಾಪುರ ಸಂತೆಯಲ್ಲಿ ಜನರು ನಿಯಮವನ್ನು ಗಾಳಿಗೆ ತೂರಿ ವಹಿವಾಟು ಮಾಡಿದರು.
ಬೆಳಿಗ್ಗೆ 10 ಗಂಟೆವರೆಗೂ ಜಿಲ್ಲಾಡಳಿತ ದಿನಸಿ, ಹಣ್ಣು, ತರಕಾರಿ ಖರೀದಿಸಲು ಅವಕಾಶ ನೀಡಿದ್ದರೂ ನರಸಾಪುರ ಸಂತೆಯಲ್ಲಿ ಮಧ್ಯಾಹ್ನ 1ಗಂಟೆಯಾದರೂ ಕೈಗಾರಿಕಾ ಪ್ರದೇಶದ ಜನ ಹಾಗೂ ಸುತ್ತಮುತ್ತಲಿನ ಊರುಗಳ ಜನರು ಭಾನುವಾರ ಸಂತೆಯಲ್ಲಿ ವೀಕೆಂಡ್ ಕರ್ಫ್ಯೂ ಇರುವುದನ್ನು ಮರೆತು ಮಾಂಸ, ಮೀನು, ಚಿಕನ್ ಖರೀದಿಸಲು ಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿದ್ದರು.