Home West Bengal Kolkata Bangladesh ರೋಗಿಗಳಿಗೆ ಚಿಕಿತ್ಸೆ ನಿಷೇಧ: Kolkata ಆಸ್ಪತ್ರೆಯ ತೀರ್ಮಾನ

Bangladesh ರೋಗಿಗಳಿಗೆ ಚಿಕಿತ್ಸೆ ನಿಷೇಧ: Kolkata ಆಸ್ಪತ್ರೆಯ ತೀರ್ಮಾನ

ಉತ್ತರ ಕೋಲ್ಕತ್ತಾದ (Kolkata) ಮಾಣಿಕ್ತಾಲಾ ಪ್ರದೇಶದ ಜೆಎನ್ ರೇ ಆಸ್ಪತ್ರೆ (JN Ray Hospital) ಬಾಂಗ್ಲಾದೇಶದ (Bangladesh) ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಆದೇಶಿಸಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ಹೆಚ್ಚುತ್ತಿರುವುದನ್ನು ಮತ್ತು ಭಾರತ ಧ್ವಜಕ್ಕೆ ಅವಮಾನವನ್ನು ಆಕ್ಷೇಪಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳು, “ಬಾಂಗ್ಲಾದೇಶದಿಂದ ಭಾರತಕ್ಕೆ ಅವಮಾನವಾಗಿದೆ. ಆದ್ದರಿಂದ, ನಾವು ಬಾಂಗ್ಲಾದೇಶದ ಪ್ರಜೆಗಳಿಗೆ ಇಂದಿನಿಂದ ಅನಿರ್ದಿಷ್ಟಕಾಲದವರೆಗೆ ಚಿಕಿತ್ಸೆ ನೀಡುವುದಿಲ್ಲ,” ಎಂದು ತಿಳಿಸಿದ್ದಾರೆ.

ಆಸ್ಪತ್ರೆಯ ಅಧಿಕಾರಿ ಸುಭ್ರಾಂಶು ಭಕ್ತ್, “ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ನಿರ್ಧಾರವು ಸೂಕ್ತ ಪ್ರತಿಕ್ರಿಯೆ. ಇತರ ಆಸ್ಪತ್ರೆಗಳೂ ಈ ಕ್ರಮವನ್ನು ಅನುಸರಿಸಬೇಕಾಗಿದೆ,” ಎಂದು ಹೇಳಿದರು.

ಅಧಿಕಾರಿಗಳ ಪ್ರಕಾರ, “ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿರುವುದರಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಅಂದು ಬಾಂಗ್ಲಾ ವಿಭಜನೆ ಹಾಗೂ ಅವರಿಗೆ ಸ್ವಾತಂತ್ರ್ಯ ನೀಡಲು ನಮ್ಮ ಭಾರತದ ಸಹಾಯ ಬೇಕಿತ್ತು, ಇಂದು ಭಾರತವನ್ನು ವಿರೋಧಿಸುತ್ತಿದೆ, ಅದಕ್ಕಾಗಿ ನಾವು ಈ ಕ್ರಮವನ್ನು ಅನುಸರಿಸಿದ್ದೇವೆ, ಇತರ ಆಸ್ಪತ್ರೆಗಳು ಕೂಡ ಈ ಕ್ರಮವನ್ನು ಅನುಸರಿಸುತ್ತದೆ ಎಂದು ಹೇಳಿದರು.

ಇಂತಹ ನಿರ್ಧಾರವು ಬಾಂಗ್ಲಾದೇಶ-ಭಾರತ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version