Bengaluru: ಹೂವುಗಳ ಪ್ರದರ್ಶನ (Flower show) ಎಂದರೆ ಸಾಕು, ಲಾಲ್ ಬಾಗ್ (Lalbagh) ಮೊದಲು ನೆನಪಾಗುತ್ತದೆ. ಪ್ರತೀ ವರ್ಷ ಲಕ್ಷಾಂತರ ಜನರು ಲಾಲ್ ಬಾಗ್ ಫ್ಲವರ್ ಶೋಗೆ ಭೇಟಿ ನೀಡುತ್ತಿದ್ದು, ವಿವಿಧ ವಿನ್ಯಾಸದ ಹೂವುಗಳ ಸೌಂದರ್ಯವನ್ನು ಅನುಭವಿಸುತ್ತಾರೆ. ಈ ಬಾರಿ, ಮಕ್ಕಳಿಗೆ ವಿಶೇಷವಾಗಿ ಕಬ್ಬನ್ ಪಾರ್ಕ್ನ (Cubbon Park) ಬಾಲಭವನ ಆವರಣದಲ್ಲಿ ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ನವೆಂಬರ್ 14 ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ, ತೋಟಗಾರಿಕೆ ಇಲಾಖೆ, ಬಾಲಭವನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಈ ಫಲಪುಷ್ಪ ಪ್ರದರ್ಶನ ನಡೆಸಲಾಗಿದೆ. ಮಕ್ಕಳಿಗೆ ಪೃಕೃತಿ ಪ್ರೇಮ ಬೆಳೆಸಲು ಹಾಗೂ ಜಾಗೃತಿ ಮೂಡಿಸಲು ಈ ಪ್ರದರ್ಶನ ಮಹತ್ವ ಪಡೆಯುತ್ತದೆ.
ನ.29 ರಂದು ಪ್ರಾರಂಭವಾದ ಈ ಫಲಪುಷ್ಪ ಪ್ರದರ್ಶನ ಡಿಸೆಂಬರ್ 1 ರವರೆಗೆ ನಡೆಯಲಿದೆ. ಪ್ರದರ್ಶನದಲ್ಲಿ ನವಿಲು, ರಾಕೇಟ್, ರೊಬೋಟ್, ಡೈನಾಸೋರ್, ಆನೆಗಳು ಹೂಗಳಿಂದ ರೂಪಿಸಲಾಗಿದ್ದು, ಕಣ್ಮನ ಸೆಳೆಯುತ್ತಿದೆ.
ವರ್ಲ್ಡ್ ಕಪ್ ಟ್ರೋಫಿ ಸೇರಿದಂತೆ ಫಲಪುಷ್ಪ ಕೃತಿಗಳನ್ನು ನೆನಪಿಗೆ ತರಲು ಜನರು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ. ಮಕ್ಕಳು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.
ಇಷ್ಟು ದಿನ ಲಾಲ್‌ಬಾಗ್ ಪುಷ್ಪ ಪ್ರದರ್ಶನ ಪ್ರಸಿದ್ಧವಾಗಿದ್ದರೂ, ಈ ಬಾರಿ ಕಬ್ಬನ್ ಪಾರ್ಕ್ನಲ್ಲೂಫಲಪುಷ್ಪ ಪ್ರದರ್ಶನ ಜನಮನ ಸೆಳೆದಿದೆ. ಶನಿವಾರ ಹಾಗೂ ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ನಿರೀಕ್ಷೆ ಇದೆ.