Udupi : ಕೊಲ್ಲೂರಿನ (Kollur) ಐತಿಹಾಸಿಕ ಪ್ರಸಿದ್ಧ ಮೂಕಾಂಬಿಕಾ ದೇವಸ್ಥಾನದಲ್ಲಿ (Sri Mookambika Temple) ಮಂಗಳವಾರ ಮೂಕಾಂಬಿಕಾ ಜನ್ಮಾಷ್ಟಮಿ (Janmashtami) ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಜನ್ಮಾಷ್ಟಮಿಯ ಪ್ರಯುಕ್ತ ದೇವಸ್ಥಾನದ ಸ್ವರ್ಣಮುಖಿ ರಂಗಮಂಟಪದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಕಲಾವಿದರು ಸಾಂಸ್ಕೃತಿಕ ಸೇವಾ ಪ್ರದರ್ಶನ ನೀಡಿದರು.
ಮೂಕಾಂಬಿಕಾ ಜನ್ಮಾಷ್ಟಮಿ ಪ್ರಯುಕ್ತ ದೇಶ, ವಿದೇಶಗಳಿಂದ ಬಂದಿದ್ದ ಸಾವಿರಾರು ಭಕ್ತರು ಭಾಗಿಯಾದರು. ಜನದಟ್ಟಣೆಯಿಂದ ದರ್ಶನ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ನಿಭಾಯಿಸಲು ದೇವಸ್ಥಾನದ ಸಿಬ್ಬಂದಿ ಹರಸಾಹಸ ಪಟ್ಟರು. ಮಧ್ಯಾಹ್ನದ ಮಂಗಳಾರತಿಯ ವೇಳೆಯಲ್ಲಿ ತುಂತುರು ಮಳೆ ಸುರಿಯಲಾರಂಭಿಸಿದ್ದರಿಂದ ಭಕ್ತರು ದೇಗುಲದ ಪ್ರಾಂಗಣದಲ್ಲಿ ಗೊಂದಲ ಉಂಟಾಗಿ ನೂಕು ನುಗ್ಗಲು ಉಂಟಾಯಿತು.