Koppal : ಗಂಗಾವತಿ ತಾಲ್ಲೂಕಿನ ಆನೆಗುಂದಿ (Anegundi, Gangavathi ಸಮೀಪದ ದುರ್ಗಾದೇವಿ ದೇವಸ್ಥಾನ ಹಿಂಬದಿಯಲ್ಲಿನ ಪುಷ್ಕರಣಿಯನ್ನು ನರೇಗಾದಡಿ (NREGA) ಪುನಶ್ಚೇತನಗೊಳಿಸಿದ್ದು ಶುಕ್ರವಾರ ಶಾಸಕ ಪರಣ್ಣ ಮುನವಳ್ಳಿ (Paranna Munavalli), ಜಿ.ಪಂ.ಸಿಇಒ ಫೌಜಿಯಾ ತರುನ್ನುಮ್ (Zilla Panchayat CEO Fauzia Taranum) ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ಅಂಜನಾದ್ರಿ,ಪಂಪಾ ಸರೋವರ, ಹನುಮನಹಳ್ಳಿ, ಚಿಕ್ಕರಾಂಪುರ, ಆನೆಗುಂದಿ ಭಾಗದಲ್ಲಿ ವಿಜಯನಗರ ಕಾಲದ ಸಂಬಂಧಪಟ್ಟ ಐತಿಹಾಸಿಕ ಕುರುಹುಗಳು ಸಾಕಷ್ಟಿದ್ದು, ಅವುಗಳನ್ನು ಪತ್ತೆ ಹಚ್ಚಿ ಅವುಗಳ ಅಭಿವೃದ್ದಿಗೆ ಪಣತೊಡಬೇಕಾಗಿದೆ. ವಿಜಯನಗರ ಸಾಮ್ಯಾಜ್ಯ ಕಾಲದ ಐತಿಹಾಸಿಕ ಸ್ನಾನಘಟ್ಟದ ಪುಷ್ಕರಣಿಯನ್ನು ನರೇಗಾ ಅಡಿ ಅಭಿವೃದ್ದಿಪಡಿಸಿದ ಜಿ.ಪಂ ಮತ್ತು ತಾ.ಪಂ, ಗ್ರಾ.ಪಂ ಅಧಿಕಾರಿಗಳ ಕಾರ್ಯ ಶ್ಲಾಘನೀಯ” ಎಂದು ಹೇಳಿದರು.
ಜಿ.ಪಂ.ಸಿಇಒ ಫೌಜಿಯಾ ತರುನ್ನುಮ್ (Zilla Panchayat CEO Fauzia Taranum) ಮಾತನಾಡಿ “ಇದೇ ಮಾದರಿಯಲ್ಲಿ ನೀರಿನ ಸಂರಕ್ಷಣೆ ಕಾಮಗಾರಿಗಳು ಮತ್ತು ಶಾಶ್ವತ ಆಸ್ತಿಗಳು ಎಲ್ಲೆಲ್ಲಿ ಸ್ಥಾಪನೆ ಮಾಡಬಹುದು ಎಂಬುದನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಯತ್ನ ಮಾಡಲಾಗುತ್ತಿದೆ. ” ಎಂದು ಹೇಳಿದರು.
ತಾ.ಪಂ ಇಓ ಡಾ.ಡಿ.ಮೋಹನ್, ಆನೆಗೊಂದಿ ರಾಜವಂಶಸ್ಥ ರಾಜ ಕೃಷ್ಣದೇವರಾಯ, ತಾಂತ್ರಿಕ ಸಂಯೋಜಕ ವಿಶ್ವನಾಥ, ತಾಂತ್ರಿಕ ಸಹಾಯಕ ಶಿವಪ್ರಸಾದ್, ಗ್ರಾ.ಪಂ ಅಧ್ಯಕ್ಷ ತಿಮ್ಮಣ್ಣ ಬಾಳೆಕಾಯಿ, ಪಿಡಿಒ ಕೃಷ್ಣಪ್ಪ, ಗ್ರಾ.ಪಂ ಸದಸ್ಯಾರದ ಸುಶೀಲಾಬಾಯಿ, ಕೆವಿ ಬಾಬು, ನರಸಿಂಹ, ಶಾರದಾಬಾಯಿ, ಮಲ್ಲಿಕಾರ್ಜುನ ಸ್ವಾಮಿ, ಗಾಳೆಮ್ಮ, ಹೊನ್ನಪ್ಪ, ಎಸ್.ಕಿರಣ್ಮಯಿ,ವೆಂಕಟೇಶ, ಸಣ್ಣ ಫಕೀರಪ್ಪ, ತಾ.ಪಂ ಸಂಯೋಜಕ ಕೆ.ಶಿವಕುಮಾರ, ಸಿಬ್ಬಂದಿ ಉಪಸ್ಥಿತರಿದ್ದರು.