Koppal : ಸಂಸ್ಥಾನ ಗವಿಮಠದ (Shree Gavisiddeshwara Matha – Gavimath) ಜಾತ್ರಾ ಮಹೋತ್ಸವದ (Jathra Mahotsava) ಅಂಗವಾಗಿ ಭಾನುವಾರ ಮಠದ ಆವರಣದಲ್ಲಿ ‘ಬಸವ ಪಟ ಆರೋಹಣ’ ಮಾಡಿ ಗವಿಸಿದ್ಧೇಶ್ವರ ಕರ್ತೃ ಗದ್ದುಗೆಯ ಸುತ್ತ 5 ಸುತ್ತ ಪ್ರದಕ್ಷಿಣೆ ಹಾಕುತ್ತಾ ಜಯಘೋಷಗಳೊಂದಿಗೆ ಶಿಲಾಸ್ತಂಭಕ್ಕೆ ಬಸವ ಪಟ ಕಟ್ಟುವುದರ ಮೂಲಕ ಜಾತ್ರಾ ಸಂಪ್ರದಾಯಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಗವಿಮಠದ ಬೆಟ್ಟದ ಮೇಲಿರುವ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ ನಡೆಸಿ ಗವಿಸಿದ್ಧೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಪ್ರಸಾದ ವಿತರಣೆ ನಡೆಯಿತು. ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಯಿತು.
Image: Gavimath Koppal