Bengaluru: KSRTC, BMTC ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿಯಲಿದ್ದಾರೆ. ಸುಮಾರು 38 ತಿಂಗಳ ವೇತನ ಬಾಕಿ, ಹೊಸ ವೇತನ ಪರಿಷ್ಕರಣೆ, ಹಾಗೂ 2021ರ ಮುಷ್ಕರದ ವೇಳೆ ಕೆಲಸದಿಂದ ತೆಗೆದುಹಾಕಲಾದ ನೌಕರರನ್ನು ಮತ್ತೆ ನೇಮಕ ಮಾಡುವಂತೆ ಒತ್ತಾಯಿಸುತ್ತಿರುವ ನೌಕರರ ಜಂಟಿ ಕ್ರಿಯಾ ಸಮಿತಿಯು ಈ ಮುಷ್ಕರಕ್ಕೆ ಕರೆ ನೀಡಿದೆ.
ಪ್ರಮುಖ ಬೇಡಿಕೆಗಳು
- ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು
- ಹೊಸ ವೇತನವನ್ನು ತ್ವರಿತವಾಗಿ ಪರಿಷ್ಕರಿಸಬೇಕು
ಇವುಗಳನ್ನು ಈಡೇರಿಸದಿದ್ದರೆ ಬಸ್ ಸೇವೆಗಳನ್ನು ನಿಲ್ಲಿಸಿ ಮುಷ್ಕರ ನಡೆಸುವುದಾಗಿ ನೌಕರರು ಎಚ್ಚರಿಸಿದ್ದಾರೆ.
ನಾವು ಎಸ್ಮಾ ಅಥವಾ ವಜಾ ಕ್ರಮಗಳಿಗೆ ಹೆದರುವವರು ಅಲ್ಲ ಎಂದು ಸಾರಿಗೆ ನೌಕರರು ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಸ್ಪಷ್ಟಪಡಿಸಿದ್ದಾರೆ.
ಮುಷ್ಕರದ ವಿಚಾರವಾಗಿ ಕೆಲ ಮಹಿಳಾ ಪ್ರಯಾಣಿಕರು, “ಬಿಎಂಟಿಸಿ ಬಸ್ ಇಲ್ಲದೆ ದಿನ ಕಳೆಯೋದು ಅಸಾಧ್ಯ. ಪ್ರತಿದಿನ ಕಚೇರಿಗೆ ಆಟೋ ಅಥವಾ ಕ್ಯಾಬ್‌ನಲ್ಲಿ ಹೋಗಲು ಖರ್ಚು ತುಂಬಾ ಜಾಸ್ತಿ ಆಗುತ್ತದೆ” ಎಂದು ಹೇಳಿದ್ದಾರೆ.
ಮಹಿಳಾ ಪ್ರಯಾಣಿಕರಿಗೆ “ಶಕ್ತಿ ಯೋಜನೆ” ಮೂಲಕ ಉಚಿತ ಬಸ್ ಸೇವೆ ನೀಡುತ್ತಿರುವ ಸರ್ಕಾರ, ನೌಕರರ ಬೇಡಿಕೆಗಳನ್ನು ಈಡೇರಿಸುವುದೋ ಅಥವಾ ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸುವದೋ ಎಂಬುದನ್ನು ಕಾದು ನೋಡಬೇಕಿದೆ.