Search
WhatsApp alerts

Home › Business

Male Passengersಗೆ ಸೀಟು ಬಿಟ್ಟುಕೊಡಲು KSRTC ಆದೇಶ!

administrator · Published

KSRTC Bus

Mysuru: ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಸೀಟುಗಳನ್ನು ಅವರಿಗೇ ಬಿಟ್ಟುಕೊಡಬೇಕು ಎಂಬ ಸೂಚನೆಗಳನ್ನು ಹಿಂದೆ ನೋಡಿದ್ದೇವೆ. ಆದರೆ, ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಜಾರಿಗೆ ಬಂದ ನಂತರ, ಈಗ ಪುರುಷರಿಗೆ ಸೀಟು (male passengers) ಬಿಟ್ಟುಕೊಡಿ ಎಂಬ ಪರಿಸ್ಥಿತಿ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮೈಸೂರು ವಿಭಾಗ ಅಧಿಕೃತ ಆದೇಶ ಹೊರಡಿಸಿದೆ. ಪುರುಷ ಪ್ರಯಾಣಿಕರಿಗೆ ಮೀಸಲಾಗಿರುವ ಸೀಟುಗಳನ್ನು ಅವರಿಗೇ ನೀಡಬೇಕು ಎಂಬ ಸೂಚನೆ ಚಾಲಕರು ಹಾಗೂ ಸಿಬ್ಬಂದಿಗೆ ನೀಡಲಾಗಿದೆ.

KSRTC ಆದೇಶದ ವಿವರ

  • ಪುರುಷ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಮಹಿಳೆಯರು ಕುಳಿತು ಪ್ರಯಾಣಿಸುತ್ತಿರುವ ಕುರಿತು ದೂರುಗಳು ಬಂದಿವೆ.
  • ಇದರಿಂದಾಗಿ ಪುರುಷ ಪ್ರಯಾಣಿಕರಿಗೆ ಆಸನ ಸಿಗುತ್ತಿಲ್ಲ ಎಂಬ ದೂರು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ.
  • ಎಲ್ಲ ಸಾರಿಗೆ ಘಟಕಗಳಲ್ಲಿ ಈ ನಿಯಮ ಪಾಲನೆ ಮಾಡಲು ಚಾಲನಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
  • ಈ ಆದೇಶದ ಅನುಸರಣಾ ವರದಿ ಕೂಡಾ ಕಳುಹಿಸುವಂತೆ ಸೂಚಿಸಲಾಗಿದೆ.

ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಇದರಿಂದ ಪುರುಷರಿಗೆ ಸೀಟು ಸಿಗುತ್ತಿಲ್ಲ ಎಂಬ ಗಂಭೀರ ವಿಷಯ KSRTC ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿರುವುದು ರಾಜ್ಯದಲ್ಲಿ ಪ್ರಥಮ ಬಾರಿ ಎಂದು ಹೇಳಲಾಗಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page