ಪ್ರಮುಖ ಬೈಕ್ ಕಂಪನಿ ಕೆಟಿಎಂ, ತನ್ನ ಹೊಸ ಬೈಕ್ “390 Adventure Enduro R” ಅನ್ನು ಭಾರತದಲ್ಲಿ ಪರಿಚಯಿಸಿದೆ. ಇದರ ಬೆಲೆ ₹3.54 ಲಕ್ಷ (ಎಕ್ಸ್‌ಶೋರೂಂ). ಈ ಬೈಕ್ ವಿಶೇಷವಾಗಿ ಸಾಹಸಮಯ (ಅಡ್ವೆಂಚರ್) ಚಾಲನೆ ಪ್ರಿಯರಿಗೆ ಸೂಕ್ತವಾಗಿದೆ.
ಆಕರ್ಷಕ ವೈಶಿಷ್ಟ್ಯಗಳು
ಈ ಬೈಕ್ ಆಫ್-ರೋಡ್ ಚಲನೆಗೆ ಹೊಂದಿಕೊಳ್ಳುವಂತಹ ವಿನ್ಯಾಸದಲ್ಲಿದೆ. ಇದರಲ್ಲಿ ಉನ್ನತ ಗುಣಮಟ್ಟದ ಸ್ಟೀಲ್ ಫ್ರೇಮ್, ಶಕ್ತಿಶಾಲಿ ಸಸ್ಪೆನ್ಶನ್ ವ್ಯವಸ್ಥೆ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಇದೆ. ಇದು ಗುಂಡಿಗಳು, ಕಚ್ಚಾ ರಸ್ತೆಗಳಲ್ಲಿ ಸುಲಭವಾಗಿ ಸಾಗುತ್ತದೆ.
ಬ್ರೇಕಿಂಗ್ ವ್ಯವಸ್ಥೆ: ಮುಂಭಾಗದಲ್ಲಿ 285mm ಡಿಸ್ಕ್ ಬ್ರೇಕ್ ಮತ್ತು ಹಿಂದಿನ ಭಾಗದಲ್ಲಿ 240mm ಡಿಸ್ಕ್ ಬ್ರೇಕ್ ಇದೆ. ABS ಸಿಸ್ಟಮ್ ಕೂಡ ಇದೆ, ಇದನ್ನು ಆಫ್-ರೋಡಿಂಗ್ ಸಮಯದಲ್ಲಿ ಸ್ವಿಚ್ ಆಫ್ ಮಾಡಬಹುದು.
ಶಕ್ತಿಯುತ ಎಂಜಿನ್: 390cc ಎಂಜಿನ್ ಇರುವ ಈ ಬೈಕ್ 45 PS ಪವರ್ ಮತ್ತು 39 Nm ಟಾರ್ಕ್ ನೀಡುತ್ತದೆ. 6 ಸ್ಪೀಡ್ ಗೇರ್ ಬಾಕ್ಸ್‌ನಿಂದ ಇದನ್ನು ಹೆಚ್ಚು ವೇಗದಲ್ಲಿ ಚಲಾಯಿಸಬಹುದು. ಈ ಎಂಜಿನ್ ಆಫ್-ರೋಡ್ ಹಾಗೂ ರಸ್ತೆ ಚಾಲನೆ ಎರಡಕ್ಕೂ ಪರ್ಫೆಕ್ಟ್.
ಟೆಕ್ನಾಲಾಜಿ: ಈ ಬೈಕ್‌ನಲ್ಲಿ LED ಲೈಟ್ಸ್, 4.2 ಇಂಚಿನ TFT ಸ್ಕ್ರೀನ್, ನ್ಯಾವಿಗೇಶನ್, ಕಾಲ್ ಮತ್ತು ಮ್ಯೂಸಿಕ್ ಕಂಟ್ರೋಲ್, ಮತ್ತು USB-C ಚಾರ್ಜಿಂಗ್ ಸೌಲಭ್ಯಗಳಿವೆ.
390 ಎಡ್ವೆಂಚರ್ ಎಂಡ್ಯೂರೋ R, ಆಫ್-ರೋಡ್ ಸವಾರರಿಗೆ ಪವರ್, ಟೆಕ್ನಾಲಾಜಿ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸುವ bike ಆಗಿದ್ದು, ಸಾಹಸಪ್ರಿಯರ ಕನಸು ನನಸಾಗಿಸಲಿದೆ.