New Delhi: ವಿಶ್ವದ ಅತಿದೊಡ್ಡ ಐಟಿ ಇನ್ಫ್ರಾಸ್ಟ್ರಕ್ಚರ್ ಸರ್ವಿಸ್ ಕಂಪನಿಯಾದ ಕಿಂಡ್ರಿಲ್ (Kyndryl) ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ 2.25 ಬಿಲಿಯನ್ ಡಾಲರ್ (ಸುಮಾರು 20,000 ಕೋಟಿ ರೂ.) ಹೂಡಿಕೆ ಮಾಡಲು ನಿರ್ಧರಿಸಿದೆ. ಇದರ ಭಾಗವಾಗಿ, ಬೆಂಗಳೂರು ನಗರದಲ್ಲಿ ಎಐ ಇನ್ನೋವೆಶನ್ ಲ್ಯಾಬ್ (Kyndryl AI Lab) ಸ್ಥಾಪನೆ ಮಾಡಲಾಗುತ್ತಿದೆ.
- ಈ ಲ್ಯಾಬ್ ಮೂಲಕ,
- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಸೇವೆ
- ಐಟಿ ಪ್ರತಿಭೆಗಳ ಅಭಿವೃದ್ಧಿ ಮತ್ತು ಡಿಜಿಟಲ್ ತರಬೇತಿ
- ಎಐ ಆಧಾರಿತ ಕನ್ಸಲ್ಟಿಂಗ್ ಸೇವೆ ಬಲಪಡಿಸುವುದು
- ಡೇಟಾ ಸೈನ್ಸ್, ಕ್ಲೌಡ್, ಪ್ಲಾಟ್ಫಾರ್ಮ್ ಎಂಜಿನಿಯರಿಂಗ್ ತರಬೇತಿ
- ಬ್ರಿಟನ್ ಮತ್ತು ಸಿಂಗಾಪುರದಂತೆ, ಇದೇ ಮಾದರಿಯ ಎಐ ಲ್ಯಾಬ್ ಈಗ ಬೆಂಗಳೂರಲ್ಲೂ ಬರಲಿದೆ.
ಭಾರತ ಸರ್ಕಾರದೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಂಡು, ಆಡಳಿತದಲ್ಲಿ ಎಐ ಬಳಕೆ, ಉದ್ಯಮ ನಿಯಮ ಸುಧಾರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಿಂಡ್ರಿಲ್ ಸಲಹೆ ನೀಡಲಿದೆ.
ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ, ಎರಡನೇ ಮತ್ತು ಮೂರನೇ ಸ್ತರ ನಗರಗಳಲ್ಲಿ ಸುಮಾರು 2 ಲಕ್ಷ ಮಂದಿಗೆ ಡಿಜಿಟಲ್ ಕೌಶಲ್ಯ ತರಬೇತಿ ನೀಡಲು ಕಿಂಡ್ರಿಲ್ ಫೌಂಡೇಶನ್ ಯೋಜಿಸಿದೆ.