Delhi: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC president Mallikarjun Kharge) ಅವರು ದೆಹಲಿಯಲ್ಲಿ ಪ್ರಜಾಪ್ರಭುತ್ವ ಉಳಿಸಲು ಶ್ರಮಿಸುತ್ತಿರುವಾಗ, ಅವರ ಹುಟ್ಟೂರು ಕಲಬುರ್ಗಿಯಲ್ಲಿ ಭೂ ಹಗರಣಗಳು ಮತ್ತು ಕುಟುಂಬ ಟ್ರಸ್ಟ್ ಹಗರಣಗಳು ನಡೆಯುತ್ತಿವೆ ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ (Lehar Singh Siroya) ವಾಗ್ದಾಳಿ ನಡೆಸಿದ್ದಾರೆ.
ಲಹರ್ ಸಿಂಗ್ ಅವರು ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿ, “ಮಹಾನ್ ಸಾಂವಿಧಾನಿಕ ತಜ್ಞನಂತೆ ವರ್ತಿಸುವ ಪ್ರಿಯಾಂಕ್ ಖರ್ಗೆ ನಿರಂತರವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ,” ಎಂದು ಟೀಕಿಸಿದ್ದಾರೆ. ಅವರ ಪ್ರಕಾರ, ಖರ್ಗೆ ಅವರ ಕುಟುಂಬ ಟ್ರಸ್ಟ್‌ಗಳು ದಲಿತ ಕೋಟೆಯಡಿ ಪಡೆದಿದ್ದ 5 ಎಕರೆ ಭೂಮಿ ಹಗರಣವು ಬೆಳಕಿಗೆ ಬಂದಿದ್ದು, ಆ ಭೂಮಿಯನ್ನು ಟ್ರಸ್ಟ್ ಹಿಂದಿರುಗಿಸಿದೆ. ಸೋನಿಯಾ ಗಾಂಧಿಯವರ RTI ಕಾನೂನಿನಿಂದ ಈ ಹಗರಣದ ದಾಖಲೆಗಳು ಲಭ್ಯವಾಗಿವೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ನಾಯಕತ್ವದ ಒಳಜಗಳದ ಬಗ್ಗೆಯೂ ಲಹರ್ ಸಿಂಗ್ ಕಿಡಿಕಾರಿದ್ದು, “ರಾಜ್ಯ ಕಾಂಗ್ರೆಸ್‌ನಲ್ಲಿ ಯಾರಿಗೂ ಯಾರ ಮೇಲೂ ನಂಬಿಕೆ ಇಲ್ಲ. ಎಲ್ಲರೂ ತಮ್ಮ ಹಿತಾಸಕ್ತಿಗೆ ಮಾತ್ರ ಕೆಲಸ ಮಾಡುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.
ಲಹರ್ ಸಿಂಗ್ ಅವರ ಪ್ರಕಾರ, ಪ್ರಜಾಪ್ರಭುತ್ವವನ್ನು ಉಳಿಸುವುದನ್ನು ಖರ್ಗೆ ಕುಟುಂಬವನ್ನು ಉಳಿಸುವುದಾಗಿ ತಪ್ಪಾಗಿ ಅರ್ಥೈಸಲಾಗಿದೆ.