back to top
26.3 C
Bengaluru
Friday, July 18, 2025
HomeEnvironmentLandslide in Sikkim: ಸೇನಾ ಶಿಬಿರಕ್ಕೆ ಆಘಾತ, 3 ಸಾವು, 6 ಮಂದಿ ನಾಪತ್ತೆ

Landslide in Sikkim: ಸೇನಾ ಶಿಬಿರಕ್ಕೆ ಆಘಾತ, 3 ಸಾವು, 6 ಮಂದಿ ನಾಪತ್ತೆ

- Advertisement -
- Advertisement -

Sikkim: ಸಿಕ್ಕಿಂ ರಾಜ್ಯದ ಛಾಟೆನ್ ಎಂಬಲ್ಲಿ ಭಾನುವಾರ ಸಂಜೆ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಸೇನಾ ಶಿಬಿರದ ಮೇಲೆ ಈ ಭೂಕುಸಿತ ಬಿದ್ದಿದೆ. ಘಟನೆಯಲ್ಲಿ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಹಾಗೂ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ನಾಲ್ವರು ಸೈನಿಕರು ಸಣ್ಣ ಗಾಯದಿಂದ ಪಾರಾಗಿದ್ದಾರೆ. ನಾಪತ್ತೆಯಾದ ಆರು ಮಂದಿಯನ್ನು ಹುಡುಕಲು ರಕ್ಷಣಾ ಕಾರ್ಯ ಚುರುಕಾಗಿ ನಡೆಯುತ್ತಿದೆ.

ಈಶಾನ್ಯ ಭಾರತದಲ್ಲಿ, ಮುಖ್ಯವಾಗಿ ಸಿಕ್ಕಿಂನಲ್ಲಿ, ಭಾರಿ ಮಳೆಯಾಗಿದೆ. ಇದರಿಂದಾಗಿ ಹಲವೆಡೆ ಭೂಕುಸಿತಗಳು ಸಂಭವಿಸಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಸುಮಾರು 1,500 ಪ್ರವಾಸಿಗರು ಸಿಕ್ಕಿಂನ ವಿವಿಧ ಭಾಗಗಳಲ್ಲಿ ಸಿಲುಕಿದ್ದಾರೆ.

ಗುರುವಾರ, ಮಂಗನ್ ಜಿಲ್ಲೆಯ ತೀಸ್ತಾ ನದಿಗೆ 11 ಪ್ರವಾಸಿಗರು ಪ್ರಯಾಣಿಸುತ್ತಿದ್ದ ವಾಹನ ಉರುಳಿ ಬಿದ್ದ ಪರಿಣಾಮ ಒಬ್ಬರ ಸಾವು ಸಂಭವಿಸಿದೆ, ಇಬ್ಬರು ಗಾಯಗೊಂಡಿದ್ದಾರೆ ಮತ್ತು ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಈ ವಾಹನ 1,000 ಅಡಿ ಆಳದ ನದಿಗೆ ಬಿದ್ದಿತ್ತು.

ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಲಾಚುಂಗ್ ಪ್ರದೇಶದ ಸಂಪರ್ಕ ರಸ್ತೆಯನ್ನು ಪುನಃ ಸ್ಥಾಪಿಸಿದ್ದು, ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ.

ತ್ರಿಪುರಾ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹದ ಪರಿಣಾಮವಾಗಿ ಸುಮಾರು 10,600 ಜನರು 60 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 201 ಮನೆಗಳಿಗೆ ಹಾನಿಯಾಗಿದ್ದು, ಮುಖ್ಯಮಂತ್ರಿ ಮಾಣಿಕ್ ಸಹಾ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page