back to top
28.2 C
Bengaluru
Saturday, August 30, 2025
HomeNewsLandslide in Southwest China: ಮನೆಗಳಲ್ಲಿ ಸಿಲುಕಿದ  ಜನರನ್ನು ರಕ್ಷಿಸಲು ಕಾರ್ಯಾಚರಣೆ

Landslide in Southwest China: ಮನೆಗಳಲ್ಲಿ ಸಿಲುಕಿದ  ಜನರನ್ನು ರಕ್ಷಿಸಲು ಕಾರ್ಯಾಚರಣೆ

- Advertisement -
- Advertisement -

Beijing: ಚೀನಾದ ನೈಋತ್ಯದ ಗುಯಿಝೌ (Landslide in southwest China) ಪ್ರಾಂತ್ಯದ ದಫಾಂಗ್ ಜಿಲ್ಲೆಯಲ್ಲಿ ಭಾನುವಾರ (ಗುರುವಾರ) ಭೂಕುಸಿತ ಸಂಭವಿಸಿದೆ. ಚಾಂಗ್ಶಿ ಮತ್ತು ಗುವಾ ಪಟ್ಟಣಗಳಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 12ಕ್ಕೂ ಹೆಚ್ಚು ಮಂದಿ ಮನೆಗಳಲ್ಲಿ ಸಿಲುಕಿದ್ದಾರೆ.

ಚಾಂಗ್ಶಿ ಪಟ್ಟಣದಲ್ಲಿ ಇಬ್ಬರು ಸಿಲುಕಿದ್ದು, ಗುವಾ ಪಟ್ಟಣದ ಕ್ವಿಂಗ್ಯಾಂಗ್ ಗ್ರಾಮದಲ್ಲಿ ಬೆಳಗಿನ ಜಾವ 3 ಗಂಟೆ ಹಾಗೂ ಬೆಳಗ್ಗೆ 9 ಗಂಟೆಗೆ ಭೂಕುಸಿತಗಳು ಸಂಭವಿಸಿವೆ. ಇಲ್ಲಿ ಎಂಟು ಮನೆಗಳು ಭೂಕುಸಿತಕ್ಕೆ ಒಳಗಾಗಿ, ಆರು ವಸತಿ ಕಟ್ಟಡಗಳಲ್ಲಿ 12ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ.

ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ತಕ್ಷಣ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ನಿಫರ್ ನಾಯಿಗಳು, ಡ್ರೋನ್ ಗಳು ಮತ್ತು ಲೈಫ್ ಡಿಟೆಕ್ಟರ್‌ಗಳ ಸಹಾಯದಿಂದ ಶೋಧ ಕಾರ್ಯ ನಡೆಯುತ್ತಿದೆ.

ಗುವಾ ಪ್ರದೇಶವು ಪರ್ವತ ಹಾಗೂ ಇಳಿಜಾರುಗಳಿಂದ ಕೂಡಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆ ಉಂಟಾಗಿದೆ. ಸಿಲುಕಿರುವವರ ನಿಖರ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ತುರ್ತು ನಿರ್ವಹಣಾ ಇಲಾಖೆ ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಸ್ಥಳಕ್ಕೆ ತಜ್ಞರ ತಂಡವೊಂದನ್ನು ಕಳುಹಿಸಿದ್ದು, ರಕ್ಷಣಾ ಕಾರ್ಯಾಚರಣೆಗಳಿಗೆ ಮಾರ್ಗದರ್ಶನ ನೀಡುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page