2025ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ (Lapata Ladies’ Movie) ಅಧಿಕೃತ ಪ್ರವೇಶ ಪಡೆದಿತ್ತು. ಮಹಿಳೆಯರ ಗುರುತಿನ ಸಮಸ್ಯೆ, ಪಿತೃಪ್ರಭುತ್ವ, ಹಾಗೂ ಸಾಮಾಜಿಕ ನಿಯಮಗಳನ್ನು ಹಾಸ್ಯದ ಸ್ಪರ್ಶದೊಂದಿಗೆ ತೋರಿಸಿರುವ ಈ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ, ಮುಂದಿನ ಹಂತಕ್ಕೆ ಆರಿಯಲು ವಿಫಲವಾದ ಈ ಚಿತ್ರ ಈಗ ನಕಲು ವಿವಾದಕ್ಕೆ ಸಿಲುಕಿದೆ.
ಇಂಟರ್ನೆಟ್ ಬಳಕೆದಾರರು ‘ಲಾಪತಾ ಲೇಡೀಸ್’ ಚಿತ್ರವು 2019ರ ಫ್ರೆಂಚ್-ಅರೇಬಿಕ್ ಕಿರುಚಿತ್ರ ‘ಬುರ್ಖಾ ಸಿಟಿ’ ಯಿಂದ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ. ‘ಬುರ್ಖಾ ಸಿಟಿ’ಯ ಕಥೆಯಲ್ಲಿ, ಜಗಳವಾಡಿದ ನಂತರ ಆಕಸ್ಮಿಕವಾಗಿ ಬುರ್ಖಾ ಧರಿಸಿದ ಮಹಿಳೆಯೊಬ್ಬರನ್ನು ಮನೆಗೆ ಕರೆತರುವ ವ್ಯಕ್ತಿಯ ಕುರಿತು ಚಿತ್ರಿಸಲಾಗಿದೆ.
ಇದೇ ರೀತಿಯ ದೃಶ್ಯಗಳು ‘ಲಾಪತಾ ಲೇಡೀಸ್’ ಚಿತ್ರದಲ್ಲಿಯೂ ಕಾಣಿಸುತ್ತವೆ. ವಿಶೇಷವಾಗಿ ರವಿ ಕಿಶನ್ ನಟಿಸಿರುವ ಪೊಲೀಸ್ ಠಾಣೆ ದೃಶ್ಯ ‘ಬುರ್ಖಾ ಸಿಟಿ’ಯಂತೆ ಇದೆ ಎಂದು ಕೆಲವರು ಟೀಕಿಸಿದ್ದಾರೆ.
ಅತ್ತ, ಹಲವರು ಇದನ್ನು ಸಮರ್ಥಿಸಿ, ಇಂತಹ ಕಥೆಗಳು ಹಲವಾರು ಸಿನಿಮಾಗಳಲ್ಲೇ ಕಂಡುಬರುತ್ತವೆ ಎಂದು ಹೇಳುತ್ತಿದ್ದಾರೆ. ರಾಂಗ್ ಐಡೆಂಟಿಟಿ ಮತ್ತು ವಧು ವಿನಿಮಯ ಎಂಬ ಪರಿಕಲ್ಪನೆಗಳು ಹಿಂದಿನಿಂದಲೂ ಭಾರತೀಯ ಸಾಹಿತ್ಯ ಮತ್ತು ಚಿತ್ರಗಳಲ್ಲಿ ಇರಲೇ ಇವೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಉದಾಹರಣೆಗೆ, ರವೀಂದ್ರನಾಥ ಠಾಗೋರರ ‘ನೌಕಾದುಬಿ’ ಕಾದಂಬರಿ, 2000ರ ದಶಕದ ಧಾರಾವಾಹಿಗಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿಯೂ ಇಂತಹ ಸಂಧರ್ಭಗಳು ಕಂಡುಬಂದಿವೆ. ಆದ್ದರಿಂದ ‘ಲಾಪತಾ ಲೇಡೀಸ್’ ಮತ್ತು ‘ಬುರ್ಖಾ ಸಿಟಿ’ ನಡುವಿನ ಹೋಲಿಕೆ ಕೇವಲ ಕಾಕತಾಳೀಯ ಎಂದು ಕೆಲವು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.
ಬಾಲಿವುಡ್‌ನಲ್ಲಿ ಈ ರೀತಿಯ ಕೃತಿಚೌರ್ಯ ಆರೋಪಗಳು ಹೊಸದಲ್ಲ. ಹಿಂದೆಯೂ ಹಲವಾರು ಸಿನಿಮಾಗಳು ಹಾಳಿಗೆ ಸಿಕ್ಕಿವೆ.
- 2012ರಲ್ಲಿ ‘ಬರ್ಫಿ’ ಚಿತ್ರ ‘ದಿ ನೋಟ್ಬುಕ್’ ಮತ್ತು ‘ಸಿಟಿ ಲೈಟ್ಸ್’ ನಿಂದ ಪ್ರಭಾವಿತವಾಗಿದೆ ಎಂದು ಟೀಕಿಸಲಾಯಿತು.
- 2019ರಲ್ಲಿ ಆಸ್ಕರ್‌ಗೆ ಪ್ರವೇಶ ಪಡೆದ ‘ಗಲ್ಲಿ ಬಾಯ್’, ಹಾಲಿವುಡ್ ಚಿತ್ರ ‘8 ಮೈಲ್’ ನಕಲು ಎಂದು ಆರೋಪವಾಯಿತು.
ಇಂತಹ ಚರ್ಚೆಗಳು ಹೊಸದಲ್ಲ. ಆದರೆ, ಇಂಟರ್ನೆಟ್ ಯುಗದಲ್ಲಿ ಇವು ಮೂಕ್ತ ಚರ್ಚೆಗೆ ಕಾರಣವಾಗಿವೆ. ‘ಲಾಪತಾ ಲೇಡೀಸ್’ ಈಗ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.