Bengaluru: ಮುಂಗಾರು ಮಳೆಯ ತಂಪಿನ ವಾತಾವರಣದಲ್ಲಿ ತಣ್ಣಗಿದ್ದ ರಾಜಕೀಯ ವಾತಾವರಣ ಇಂದಿನಿಂದ ಕಾವೇರುವ ಸಾಧ್ಯತೆ ಇದೆ. ಮಳೆಗಾಲದ ವಿಧಾನಮಂಡಲ ಅಧಿವೇಶನ (Legislative session) ಇಂದಿನಿಂದ ಆರಂಭವಾಗಿ ಆಗಸ್ಟ್ 22ರವರೆಗೆ ನಡೆಯಲಿದೆ.
ಬಿಜೆಪಿ ಮತ್ತು ಜೆಡಿಎಸ್‌ನ ರಣತಂತ್ರ
- ಈ ಬಾರಿ ಸರ್ಕಾರದ ವಿರುದ್ಧ ಹಲವು ವಿಚಾರಗಳಲ್ಲಿ ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿವೆ.
- RCB ಸಂಭ್ರಮಾಚರಣೆ ಸಂದರ್ಭದ ದುರಂತದಲ್ಲಿ 11 ಜನರ ಸಾವಿನ ವಿಷಯವನ್ನು ಪ್ರಮುಖವಾಗಿ ಎತ್ತುವ ಸಾಧ್ಯತೆ.
- ಪೊಲೀಸ್ ಅಧಿಕಾರಿಗಳ ಅಮಾನತು, ಸರ್ಕಾರದ ತೀರ್ಮಾನಗಳ ಗೊಂದಲ, ರೈತರಿಗೆ ಯೂರಿಯಾ ಕೊರತೆ ವಿಷಯಗಳಲ್ಲಿ ಚರ್ಚೆ ಕಾವೇರಲಿದೆ.
- ಗುತ್ತಿಗೆದಾರರಿಂದ 60% ವಸೂಲಿ, ಕಾನೂನು-ಸುವ್ಯವಸ್ಥೆ ಹದಗೆಟ್ಟ ಆರೋಪ, ಧರ್ಮಸ್ಥಳದಲ್ಲಿ ಶವ ಹೂತು ಪ್ರಕರಣಗಳೂ ಚರ್ಚೆಗೆ ಬರಲಿವೆ.
- ರಾಹುಲ್ ಗಾಂಧಿ ಅವರ ‘ಮತಗಳ್ಳತನ’ ಆರೋಪ ಮತ್ತು ದ್ವೇಷ ಭಾಷಣ ನಿಯಂತ್ರಣ ವಿಧೇಯಕ ಕುರಿತ ಚರ್ಚೆ ಸಾಧ್ಯ.
ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ
- ಭಾನುವಾರ ಎರಡೂ ಪಕ್ಷಗಳು ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಸಮನ್ವಯ ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸಿದವು.
- ಇಂದು ಬೆಳಗ್ಗೆ 10.30ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಇಬ್ಬರ ಶಾಸಕರು ಹಾಗೂ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ.
- ಪ್ರತಿದಿನ ಒಂದೊಂದು ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯೋಜನೆ ರೂಪಿಸಲಾಗಿದೆ.
- ರೈತರ ಸಮಸ್ಯೆ, ಉತ್ತರ ಕರ್ನಾಟಕಕ್ಕೆ ಅನ್ಯಾಯ, ಭ್ರಷ್ಟಾಚಾರ ವಿಷಯಗಳಲ್ಲಿ ಧ್ವನಿ ಎತ್ತಲು ತೀರ್ಮಾನ.
ಕಾಂಗ್ರೆಸ್‌ನ ತಂತ್ರ
- ಬಿಜೆಪಿ, ಜೆಡಿಎಸ್ ಹೋರಾಟಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ತಂತ್ರ ರೂಪಿಸಿದೆ.
- ಮತಗಳ್ಳತನ ಆರೋಪ, ಕೇಂದ್ರದಿಂದ ಅನುದಾನದಲ್ಲಿ ತಾರತಮ್ಯ ಮುಂತಾದ ವಿಷಯಗಳಲ್ಲಿ ಕೌಂಟರ್ ನೀಡುವ ಯೋಜನೆ.
- ಸರ್ಕಾರ ಮಂಡಿಸಲು ಉದ್ದೇಶಿಸಿರುವ ವಿಧೇಯಕಗಳು, ಈ ಬಾರಿಯ ಅಧಿವೇಶನದಲ್ಲಿ ಒಟ್ಟು 27 ವಿಧೇಯಕಗಳನ್ನು ಮಂಡಿಸಲು ಸರ್ಕಾರ ತೀರ್ಮಾನಿಸಿದೆ.
ಮುಖ್ಯ ವಿಧೇಯಕಗಳು
- ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕ
- ಬಾಲ್ಯ ವಿವಾಹ ತಿದ್ದುಪಡಿ ವಿಧೇಯಕ
- ಫೇಕ್ ನ್ಯೂಸ್ ಮತ್ತು ತಪ್ಪು ಮಾಹಿತಿ ನಿರ್ಬಂಧಕ ವಿಧೇಯಕ
- ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ
- ಮಂಗಳವಾರ ನಡೆಯುವ ಸದನ ಸಲಹಾ ಸಮಿತಿಯಲ್ಲಿ ವಿಧೇಯಕಗಳ ಪಟ್ಟಿ ಮಂಡಿಸಲಾಗುತ್ತದೆ.