Bengaluru: ಲೆನೊವೋ (Lenovo) ಕಂಪನಿ ತನ್ನ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಇದು laptop ಗಳ ಲೋಕದಲ್ಲಿ ಹೊಸ ತಿರುವು ತಂದಿದೆ. ಲಾಸ್ ವೇಗಾಸ್ ನಲ್ಲಿ ನಡೆದ CES 2024 ತಂತ್ರಜ್ಞಾನ ಪ್ರದರ್ಶನದಲ್ಲಿ ಲೆನೊವೋ ತನ್ನ “rollable laptop” ಅನ್ನು ಪ್ರಥಮ ಬಾರಿಗೆ ಅನಾವರಣ ಮಾಡಿತ್ತು. ಈ laptop ವಿಶೇಷತೆ ಎಂದರೆ, ಇದರ ಸ್ಕ್ರೀನ್ ಒಂದು ಗುಂಡಿ ಒತ್ತಿದರೆ ಅಥವಾ ಇಂಗಿತ (gesture) ಮೂಲಕ 14 ಇಂಚಿನಿಂದ 16.7 ಇಂಚಿಗೆ ವಿಸ್ತಾರವಾಗುತ್ತದೆ.
ಈ Laptop ನ ತಾಂತ್ರಿಕ ವಿವರಗಳು
- ಪ್ರೊಸೆಸರ್: ಇಂಟೆಲ್ ಕೋರ್ ಅಲ್ಟ್ರಾ 7
- ರ್ಯಾಮ್: 32 GB
- ಸ್ಟೋರೇಜ್: 1 TB ವರೆಗೆ ಹೆಚ್ಚಿಸಬಹುದಾದ SSD
- ಆಪರೇಟಿಂಗ್ ಸಿಸ್ಟಮ್: ವಿಂಡೋಸ್ 11 ಪ್ರೊ
- ಡಿಸ್ಪ್ಲೇ: ಸ್ಟ್ರೆಚ್ ಆಗುವ OLED ಸ್ಕ್ರೀನ್ (14″ ರಿಂದ 16.7″ ವರೆಗೆ)
- ಬ್ಯಾಟರಿ: 66 Wh ಸಾಮರ್ಥ್ಯದ ಬ್ಯಾಟರಿ
- ಆಡಿಯೋ: ಡಾಲ್ಬಿ ಅಟ್ಮಾಸ್ ಬೆಂಬಲಿತ ಹರ್ಮನ್ ಕಾರ್ಡನ್ ಸ್ಪೀಕರ್
- ಕನೆಕ್ಟಿವಿಟಿ: ವೈ-ಫೈ 7, ಬ್ಲೂಟೂತ್ 5.4, ಡ್ಯುಯಲ್ ಥಂಡರ್ಬೋಲ್ಟ್ 4 ಪೋರ್ಟ್
- ಕ್ಯಾಮೆರಾ: 5 ಮೆಗಾಪಿಕ್ಸೆಲ್ ವೆಬ್ಕ್ಯಾಮ್ (IR ಹಾಗೂ ಇ-ಶಟರ್‌ನೊಂದಿಗೆ)
ವೈಶಿಷ್ಟ್ಯಗಳು: ಈ laptop ಉದ್ದದ OLED ಸ್ಕ್ರೀನ್ ಹೊಂದಿದ್ದು, ಚಾಸಿಸ್ ಒಳಗೆ ಜಾರುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಸ್ಕ್ರೀನ್ ದೊಡ್ಡದಾಗಿ ಅನಿಸುತ್ತದೆ ಮತ್ತು ಹೆಚ್ಚು ವಿಷಯ ವೀಕ್ಷಿಸಲು ಅನುಕೂಲವಾಗುತ್ತದೆ. ಇಷ್ಟೆಲ್ಲ ತಂತ್ರಜ್ಞಾನವಿರುವ laptop ನ ತೂಕ ಕೇವಲ 3.73 ಪೌಂಡ್ ಮತ್ತು ದಪ್ಪತೆ ಕೇವಲ 0.78 ಇಂಚು ಮಾತ್ರ.
ಬೆಲೆ: ಈ laptop ನ್ನು ಲೆನೊವೋ ತನ್ನ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದು, ಇದರ ಆರಂಭಿಕ ಬೆಲೆ ಸುಮಾರು 3,499 ಯುಎಸ್ ಡಾಲರ್ ಆಗಿದೆ, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹3 ಲಕ್ಷ.