Home Technology LG ಯ ಹೊಸ ತಂತ್ರಜ್ಞಾನ: ರಬ್ಬರನಂತೆ ಎಳೆಯಬಹುದಾದ Display

LG ಯ ಹೊಸ ತಂತ್ರಜ್ಞಾನ: ರಬ್ಬರನಂತೆ ಎಳೆಯಬಹುದಾದ Display

LG Stretchable Display

2024ರಲ್ಲಿ ತಂತ್ರಜ್ಞಾನವು ಹೊಸ ಹಾದಿ ಹಿಡಿದಿದ್ದು, ದಕ್ಷಿಣ ಕೊರಿಯಾದ LG ಕಂಪನಿ (South Korean company LG) ಹಿಗ್ಗಿಸಬಹುದಾದ display ಪ್ಯಾನೆಲ್ ( LG Stretchable Display) ಅನ್ನು ಪರಿಚಯಿಸಿದೆ. ಈ display 50% ವರೆಗೆ ಹಿಗ್ಗಿಸಬಹುದಾಗಿದ್ದು, ಮಡಚಬಹುದು, ತಿರುಚಬಹುದು, ಹಾಗೂ ಎಳೆದು ಬಗ್ಗಿಸಲು ತಕ್ಕಂತೆ ರೂಪಿಸಲಾಗಿದೆ.

Displayಯ ವಿನ್ಯಾಸ ಮತ್ತು ತಂತ್ರಜ್ಞಾನ

  • ಗಾತ್ರ: 12 ಇಂಚು (ಹಿಗ್ಗಿದರೆ 18 ಇಂಚು)
  • ಪಿಕ್ಸೆಲ್ ದಟ್ಟಣೆ: 100 PPI
  • ಬಣ್ಣಗಳು: ಪೂರ್ಣ RGB
  • ಮೂಲವಸ್ತು: ಸಿಲಿಕಾನ್ (ಕಾಂಟ್ಯಾಕ್ಟ್ ಲೆನ್ಸ್ ತಂತ್ರಜ್ಞಾನ)
  • ಲೈಟಿಂಗ್ ತಂತ್ರಜ್ಞಾನ: ಮೈಕ್ರೋ LED (40 ಮೈಕ್ರೋಮೀಟರ್)

ಬಳಕೆಯ ಸಾಧ್ಯತೆಗಳು

  • ಬಟ್ಟೆಗಳಲ್ಲಿ ಅಳವಡಿಕೆ: ದೇಹದ ಆಕಾರಕ್ಕೆ ತಕ್ಕಂತೆ ಬಟ್ಟೆಗಳಲ್ಲಿ ಬಳಸಬಹುದು.
  • ವಾಹನ ವಿನ್ಯಾಸ: ಕಾರಿನ ಡ್ಯಾಶ್ಬೋರ್ಡ್ ಅಥವಾ ಇತರ ಭಾಗಗಳಲ್ಲಿ ಹಿಗ್ಗಿಸಬಹುದಾದ display ಅನುಕೂಲಕರವಾಗಬಹುದು.
  • ಕಠಿಣ ಪರಿಸರದಲ್ಲಿ ಬಳಕೆ: ಹೆಚ್ಚಿನ ತಾಪಮಾನ, ಕಡಿಮೆ ತಾಪಮಾನ, ಹಾಗೂ ಬಾಹ್ಯ ಆಘಾತಗಳನ್ನು ತಡೆದುಕೊಳ್ಳುವ ಸಾಮರ್ಥ್ಯ.

LG 2022ರಲ್ಲಿ ಮೊದಲ ಬಾರಿಗೆ 20% ವರೆಗೆ ಹಿಗ್ಗಿಸಬಹುದಾದ display ಪರಿಚಯಿಸಿತ್ತು. 2024ರಲ್ಲಿ ಈ ತಂತ್ರಜ್ಞಾನವನ್ನು 50% ವರೆಗೆ ಅಭಿವೃದ್ಧಿ ಪಡಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ.

ಈ ಹೊಸ display ತಂತ್ರಜ್ಞಾನವು ಬಟ್ಟೆ, ವಾಹನ, ಹಾಗೂ ಇತರ ಉದ್ಯಮಗಳಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯತೆಯಿದೆ ಎಂದು LG ವಿಶ್ವಾಸ ವ್ಯಕ್ತಪಡಿಸಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version