New Delhi: AICC ಹೊಸ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕಸಭಾ ವಿಪಕ್ಷ ನಾಯಕ (Lok Sabha opposition leader) ರಾಹುಲ್ ಗಾಂಧಿ, (Rahul Gandhi) ಬಿಜೆಪಿ ಮತ್ತು ಆರ್‌ಎಸ್‌ಎಸ್ ವಶಪಡಿಸಿಕೊಂಡಿರುವ ಭಾರತದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.
ರಾಹುಲ್ ಗಾಂಧಿ ಹೇಳಿದರು, “ನಾವು RSS ಸಿದ್ಧಾಂತದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇಂದು ಬಿಜೆಪಿ ಮತ್ತು RSS ನಮ್ಮ ದೇಶದ ಎಲ್ಲಾ ಸಂಸ್ಥೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ. ಹೀಗಾಗಿ ನಾವು ಈ ಸಂಸ್ಥೆಗಳಿಗೆ ವಿರುದ್ಧವಾಗಿ ಹೋರಾಡಬೇಕಾಗಿದೆ.”
ಮಾಧ್ಯಮಗಳು ಮುಕ್ತವಾಗಿಲ್ಲ ಮತ್ತು ನ್ಯಾಯಯುತವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. “ಮಹಾರಾಷ್ಟ್ರದಲ್ಲಿ ಸುಮಾರು ಒಂದು ಕೋಟಿ ಹೊಸ ಮತದಾರರು ದಿಢೀರ್ ಕಾಣಿಸಿಕೊಂಡಿದ್ದಾರೆ. ಇದು ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಯಾಗಿದೆ. ಪಾರದರ್ಶಕತೆಯನ್ನು ಒದಗಿಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ,” ಎಂದು ಹೇಳಿದರು.
“ಭಾರತದಲ್ಲಿ ಬಿಜೆಪಿಯನ್ನು ತಡೆಯಲು congress ಮಾತ್ರ ಸಮರ್ಥವಾಗಿದೆ. ಬೇರೆ ಯಾವುದೇ ಪಕ್ಷ ಈ ಕೆಲಸವನ್ನು ಮಾಡಲು ಶಕ್ತವಿಲ್ಲ,” ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.