Bengaluru: ಲೋಕಾಯುಕ್ತ ಅಧಿಕಾರಿಗಳು (Lokayukta raid) ರಾಜ್ಯದ 6 ಜಿಲ್ಲೆಗಳಲ್ಲಿ, ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರುಗಿ, ರಾಯಚೂರು, ಮತ್ತು ಚಿತ್ರದುರ್ಗದಲ್ಲಿ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗುತ್ತಿದೆ.
ಕಲಬುರುಗಿ ಮಹಾನಗರ ಪಾಲಿಕೆ ಉಪ ಆಯುಕ್ತ ಆರ್.ಪಿ. ಜಾಧವ್ ಅವರ ಮನೆ ಮೇಲೆ ಲೋಕಾಯುಕ್ತ SP ಬಿ.ಕೆ. ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಉದಯನಗರದಲ್ಲಿರುವ ಅವರ ನಿವಾಸದಲ್ಲಿ ಆಸ್ತಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಬೇರೆ ಅಧಿಕಾರಿಗಳ ಮನೆಗಳ ಮೇಲೆ ದಾಳಿ
- ಬೆಂಗಳೂರು: ಲೋಕೇಶ್ ಬಾಬು (ಬೆಸ್ಕಾಂ ಇಂಜಿನಿಯರ್)
- ಸುರೇಶ್ ಬಾಬು (ಕಂದಾಯ ಇನ್ಸ್‌ಪೆಕ್ಟರ್)
- ಕೃಷ್ಣಪ್ಪ (ಬಿಬಿಎಂಪಿ ತೆರಿಗೆ ಇನ್ಸ್‌ಪೆಕ್ಟರ್)
- ಸುನೀಲ್ ಕುಮಾರ್ (ಜಿಲ್ಲಾ ಆರೋಗ್ಯಾಧಿಕಾರಿ)
- ಚನ್ನಪಟ್ಟಣ: ನಂಜುಡಯ್ಯ (ಶಸ್ತ್ರ ಡಿವೈಎಸ್ಪಿ)
- ಗದಗ: ಲಕ್ಷ್ಮಣ್ (ಜಿಲ್ಲಾ ಪಂಚಾಯಿತಿ SDA)
- ಕಲಬುರುಗಿ: ರಾಮಪ್ಪ (ಮಹಾನಗರ ಪಾಲಿಕೆ ಇಂಜಿನಿಯರ್)
- ರಾಯಚೂರು: ರಮೇಶ್ (ಅಬಕಾರಿ ಇನ್ಸ್‌ಪೆಕ್ಟರ್)
- ಚಿತ್ರದುರ್ಗ: ಸುರೇಶ್ (ಅರಣ್ಯ ಇಲಾಖೆ ಎಸಿಎಫ್)
ಚಿತ್ರದುರ್ಗ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಯ ಮನೆ, ಚಳ್ಳಕೆರೆ, ಹೊಸ ಬ್ಯಾಡರಹಟ್ಟಿ, ಬೆಂಗಳೂರು, ಮತ್ತು ಹಿರಿಯೂರು ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆದಿದೆ. ಕೊಪ್ಪಳದಲ್ಲೂ ಪರಿಶೀಲನೆ ನಡೆದಿದೆ, ಅಬಕಾರಿ ಇನ್ಸ್‌ಪೆಕ್ಟರ್ ರಮೇಶ್ ಅಗಡಿ ಮನೆ, ಕಚೇರಿ ಮತ್ತು ತೋಟದ ಮನೆ ಮೇಲೆ ದಾಳಿ ನಡೆದಿದೆ.
ಗದಗದಲ್ಲಿ ಐದು ಕಡೆ ದಾಳಿ ನಡೆದಿದೆ, ಗದಗ ಜಿಲ್ಲಾ ಪಂಚಾಯಿತಿಯ SDA ಲಕ್ಷ್ಮಣ್ ಅವರ ಮನೆ, ಗಜೇಂದ್ರಗಡ ಮತ್ತು ಹಾವೇರಿ ಸೇರಿ ಐದು ಸ್ಥಳಗಳಲ್ಲಿ ದಾಳಿ ನಡೆಯಿತು.
ಲೋಕಾಯುಕ್ತ ದಾಳಿ ಭ್ರಷ್ಟ ಅಧಿಕಾರಿಗಳಿಗೆ ತೀವ್ರ ಶಾಕ್ ನೀಡಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ.