New Delhi: ಕೇಂದ್ರ ಸಚಿವ ಸಂಪುಟವು ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) 30,000 ಕೋಟಿ ರೂ. LPG ಸಬ್ಸಿಡಿಯನ್ನು ಮಂಜೂರು ಮಾಡಿದೆ. ಈ ಕ್ರಮದಿಂದ ಅಡುಗೆ ಅನಿಲವನ್ನು ಗ್ರಾಹಕರಿಗೆ ಹೆಚ್ಚು ಕೈಗೆಟುಕುವ ದರದಲ್ಲಿ ಒದಗಿಸುವ ಉದ್ದೇಶವಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಉಜ್ವಲ ಯೋಜನೆಗೆ ಮುಂದುವರಿದ ಸಬ್ಸಿಡಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ 2025-26ರವರೆಗೆ 12,000 ಕೋಟಿ ರೂ. ಸಬ್ಸಿಡಿಯನ್ನು ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ PMUY ಗ್ರಾಹಕರು ವರ್ಷಕ್ಕೆ 9 ಬಾರಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಖರೀದಿಗೆ 300 ರೂ. ಸಬ್ಸಿಡಿ ಪಡೆಯುತ್ತಾರೆ. ಇದರಿಂದ ಬಡ ಕುಟುಂಬಗಳಿಗೆ ಅಡುಗೆ ಅನಿಲ ನಿರಂತರವಾಗಿ ಲಭ್ಯವಾಗುವುದು. 2016ರಲ್ಲಿ ಪ್ರಾರಂಭವಾದ ಈ ಯೋಜನೆಯಡಿಯಲ್ಲಿ ಈಗಾಗಲೇ ದೇಶದಾದ್ಯಂತ 10.33 ಕೋಟಿಗೂ ಹೆಚ್ಚು ಸಂಪರ್ಕಗಳನ್ನು ಒದಗಿಸಲಾಗಿದೆ.
ತಾಂತ್ರಿಕ ಶಿಕ್ಷಣ MERITE ಯೋಜನೆಗೆ ಮಂಜೂರು: ‘ತಾಂತ್ರಿಕ ಶಿಕ್ಷಣದಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ಸುಧಾರಣೆ’ (MERITE) ಯೋಜನೆಗೆ 4,200 ಕೋಟಿ ರೂ. ಮಂಜೂರಾಗಿದೆ. ಇದು 275 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.
ಯೋಜನೆಯ ಉದ್ದೇಶ
- ಪಠ್ಯಕ್ರಮ ಆಧುನೀಕರಣ
- ವೃತ್ತಿ ತರಬೇತಿ
- ಸುಧಾರಿತ ಇಂಟರ್ನ್ಶಿಪ್ ಅವಕಾಶ
- ತಾಂತ್ರಿಕ ಶಿಕ್ಷಣದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವುದು