Bengaluru: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಇದರಿಂದ ಕಳೆದ ವರ್ಷಕ್ಕಿಂತ ಈ ವರ್ಷ ಮೆಟ್ರೋ (Metro) ಆದಾಯದಲ್ಲಿ ಭಾರೀ ಏರಿಕೆ ಕಂಡಿದೆ.
ಕಳೆದ ವರ್ಷ ಅಕ್ಟೋಬರ್ 1 ರಿಂದ 24ರ ತನಕ 1.25 ಕೋಟಿ ಜನರು ನಮ್ಮ ಮೆಟ್ರೋದಲ್ಲಿ ಸಂಚಾರವನ್ನು ನಡೆಸಿದ್ದರು. 2024ರಲ್ಲಿ 1.85 ಕೋಟಿ ಜನರು ಸಂಚಾರ ನಡೆಸಿದ್ದಾರೆ. ಹೆಚ್ಚಿನ ಜನರು ಮೆಜೆಸ್ಟಿಕ್‌ನಿಂದ ಬೇರೆ ಬೇರೆ ಕಡೆಗೆ ಸಂಚಾರ ನಡೆಸಿದ್ದಾರೆ ಎಂದು BMRCL ಅಧಿಕಾರಿಗಳು ಹೇಳಿದ್ದಾರೆ.
ಆದರೆ ಈ ವರ್ಷ ಅಕ್ಟೋಬರ್ ನಲ್ಲಿ 1.85 ಕೋಟಿ ಜನರು ಮೆಟ್ರೋ ಬಳಸಿದ್ದಾರೆ. ಈ ಬಾರಿ 48.35 ಕೋಟಿ ರೂಪಾಯಿ ಆದಾಯ ಬಂದಿದ್ದು, ಕಳೆದ ವರ್ಷಕ್ಕಿಂತ ಸುಮಾರು 9.22 ಕೋಟಿ ರೂಪಾಯಿ ಹೆಚ್ಚಿನ ಆದಾಯ ಬಂದಿದೆ.
ಬೆಂಗಳೂರಿನಲ್ಲಿ ಮಳೆಯ ಪ್ರಯಾಣ ಹೆಚ್ಚಾಗಿದ್ದ ಕಾರಣ ಹೆಚ್ಚಿನ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಅದರಲ್ಲೂ ಅತಿ ಹೆಚ್ಚು ಪ್ರಯಾಣಿಕರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣವನ್ನು ಬಳಸಿದ್ದಾರೆ.
2024 ವರ್ಷದ ಆರಂಭದಿಂದ ಅಕ್ಟೋಬರ್ 24 ರವರೆಗೆ, BMRCL ಒಟ್ಟು 1.52 ಕೋಟಿ ಪ್ರಯಾಣಿಕರನ್ನು ಬೆಳೆಸಿದ್ದಾರೆ. ಮಾನ್ಸೂನ್ ಮಳೆಯಿಂದ ಹವಾಮಾನ ವೈಪರಿತ್ಯ ಹದಗೆಟ್ಟ ಪರಿಣಾಮ ಬೆಂಗಳೂರು ಟ್ರಾಫಿಕ್ ಜಾಮ್ ನಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಪ್ರಯಾಣಿಕರು ಮೆಟ್ರೋಗೆ ಕಡೆ ಮುಖ ಮಾಡಿದ್ದರು.
ಬೆಂಗಳೂರು ನಗರದ ನಮ್ಮ ಮೆಟ್ರೋದ ಬಹು ನಿರೀಕ್ಷಿತ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ (Yellow Line). ಡಿಸೆಂಬರ್ ಅಂತ್ಯ ಅಥವ 2025ರ ಜನವರಿಯಲ್ಲಿ ಈ ಮಾರ್ಗ ಉದ್ಘಾಟನೆಯಾಗುವ ನಿರೀಕ್ಷೆ ಇದೆ.
ಇದರಿಂದಾಗಿ ನಮ್ಮ ಮೆಟ್ರೋ ಪ್ರತಿದಿನದ ಪ್ರಯಾಣಿಕರ ಸಂಖ್ಯೆ 10 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಈ ಮಾರ್ಗ ಉದ್ಘಾಟನೆಯಾದರೆ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.