Shivamogga: ವಿದೇಶಿ ಬೆಳೆ ಆಗಿದ್ದ ಮೆಕಡೇಮಿಯಾ (Macadamia) ಈಗ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಇದು ನಿಂಬೆಹಣ್ಣಿಗೆ ಹೋಲುವ ಹಸಿರು ಬಣ್ಣದ ಬೀಜ, ಚಾಕೊಲೇಟ್ ಮತ್ತು ಐಸ್‌ಕ್ರೀಂ ತಯಾರಿಕೆಯಲ್ಲಿ ಬಳಸುತ್ತಾರೆ. ಮೆಕಡೇಮಿಯಾ ಬೆಳೆ 4 ವರ್ಷಗಳಲ್ಲಿ ಫಲ ನೀಡಲು ಆರಂಭಿಸುತ್ತದೆ ಮತ್ತು ಕಾಫಿ ಗಿಡದಷ್ಟು ಎತ್ತರಕ್ಕೆ ಬೆಳೆಯುತ್ತದೆ.
ಮೆಕಡೇಮಿಯಾ ಕಟಾವು ವರ್ಷಕ್ಕೆ ಎರಡು ಸಲ ಮಾಡಬಹುದು. ಬೆಳೆ ಒಣಗಿಸಿ, ಸಿಪ್ಪೆ ತೆಗೆದು ಒಳಗಿನ ಬಿಳಿ ಬೀಜವನ್ನು ಮಾರಾಟ ಮಾಡುತ್ತಾರೆ. ಪ್ರತಿ ಕೆಜಿಗೆ 3 ರಿಂದ 4 ಸಾವಿರ ರೂ. ತನಕ ಮಾರಾಟ ಮಾಡಲಾಗುತ್ತಿದೆ, ಅಡಕೆಯಷ್ಟು ಜನಪ್ರಿಯವಾಗುತ್ತಿದೆ. ಮೆಕಡೇಮಿಯಾ ಗೂಬ್ಬರ ಮತ್ತು ನೀರಿನ ಕಡಿಮೆ ಬೇಡಿಕೆಯ ಬೆಳೆ, ಒಣ ಭೂಮಿಯಲ್ಲಿ ಸಹ ಚೆನ್ನಾಗಿ ಬೆಳೆಯುತ್ತದೆ.
ಮಲೆನಾಡು ಮತ್ತು ಬಯಲಿನ ಪ್ರದೇಶಗಳಲ್ಲಿ ರೈತರು ಮೆಕಡೇಮಿಯಾ ಸಸಿ ಖರೀದಿಸಿ ಬೆಳೆಸಲು ಇಚ್ಛೆ ತೋರುತ್ತಿದ್ದಾರೆ. ರೈತ ಕೃಷ್ಣರು ಮೆಕಡೇಮಿಯಾ ಬೆಳೆದು ಉತ್ತಮ ಮಾರುಕಟ್ಟೆ ಸಿಕ್ಕಿರುವುದಾಗಿ ಹೇಳಿದ್ದಾರೆ. ಅಡಕೆಯಾದರೆ ಮರದಿಂದ ಇಳಿಸಬೇಕು, ಅದನ್ನು ಬೇಯಿಸಬೇಕು, ನಂತರ ಒಣಗಿಸಿ ಮಾರಾಟ ಮಾಡಬೇಕು. ಆದರೆ, ಮೆಕಡೇಮಿಯಾದಲ್ಲಿ ಅಷ್ಟೆಲ್ಲ ಕೆಲಸವಿಲ್ಲ. ಇದು 4 ವರ್ಷದ ನಂತರ ಬೆಳೆ ಬರಲು ಪ್ರಾರಂಭಿಸುತ್ತದೆ” ಎಂದು ರೈತ ಕೃಷ್ಣ ಮಾಹಿತಿ ನೀಡಿದರು.
ಈ ಬೆಳೆ ಹಾಕಿದ 4 ವರ್ಷಕ್ಕೆ ಫಸಲು ಬರಲು ಪ್ರಾರಂಭಿಸುತ್ತದೆ. ಗಿಡದಿಂದ ಮರವಾಗಿ ಬೆಳೆಯುತ್ತದೆ. ಒಂದು ಮರದಿಂದ 120 ಕೆಜಿ ತನಕ ಬೆಳೆ ತೆಗೆಯಬಹುದು. ಇದಕ್ಕೆ ಹೆಚ್ಚು ಗೂಬ್ಬರ, ನೀರು ಬೇಕಿಲ್ಲ. ಒಂದು ರೀತಿ ಕಾಡು ಜಾತಿಯ ರೀತಿಯಲ್ಲಿ ಇದು ಬೆಳೆಯುತ್ತದೆ. ಒಣ ಭೂಮಿಯಲ್ಲೂ ಇದು ಚೆನ್ನಾಗಿ ಬೆಳೆಯುತ್ತದೆ. ವರ್ಷದಲ್ಲಿ ಎರಡು ಸಲ ಕಟಾವು ಮಾಡಬಹುದು. ಇದರ ಬಗ್ಗೆ ತಿಳಿದಿರುವ ರೈತರು ಅಡಕೆಗಿಂತಹ ಮೆಕಡೇಮಿಯಾ ಸಸಿಗಳನ್ನು ಖರಿದಿಸಿಕೊಂಡು ಹೋಗುತ್ತಿದ್ದಾರೆ. ಇಂತಹ ಬೆಳೆಯ ಬಗ್ಗೆ ಇನ್ನಷ್ಟು ಅರಿವು, ಮಾರುಕಟ್ಟೆ ವ್ಯವಸ್ಥೆ ಮಾಡಬೇಕಿದೆ ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.