back to top
20.3 C
Bengaluru
Monday, October 6, 2025
HomeIndiaMadhya Scam: ಮಾಜಿ ಸಿಎಂ ಭೂಪೇಶ್ ಬಘೇಲ್ ಮಗ ಚೈತನ್ಯ ಬಂಧನ

Madhya Scam: ಮಾಜಿ ಸಿಎಂ ಭೂಪೇಶ್ ಬಘೇಲ್ ಮಗ ಚೈತನ್ಯ ಬಂಧನ

- Advertisement -
- Advertisement -

Raipur (Chhattisgarh): ಮಧ್ಯ ಹಗರಣಕ್ಕೆ ಸಂಬಂಧಿಸಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಮಗ ಚೈತನ್ಯ ಬಘೇಲ್ ಮತ್ತು ಮತ್ತೊಬ್ಬ ಆರೋಪಿಯನ್ನು ಎಸಿಬಿ ಮತ್ತು ಇಒಡಬ್ಲ್ಯೂ ಬಂಧಿಸಿದ್ದಾರೆ.

ಜುಲೈ 18ರಂದು ಹಣ ವರ್ಗಾವಣೆಯ ಪ್ರಕರಣಕ್ಕೆ ಸಂಬಂಧಿಸಿದ ಆರೋಪದ ಮೇಲೆ ಚೈತನ್ಯ ಬಂಧನಗೊಳ್ಳಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬುಧವಾರ ಪ್ರೊಡಕ್ಷನ್ ವಾರೆಂಟ್ ಮೂಲಕ ಭ್ರಷ್ಟಾಚಾರ ವಿರೋಧಿ ದಳ ಮತ್ತು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಚೈತನ್ಯ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿ, ಅಕ್ಟೋಬರ್ 6ರವರೆಗೆ ತಮ್ಮ ಕಸ್ಟಡಿಗೆ ತೆಗೆದುಕೊಂಡರು.

ಈ ಸಂಬಂಧ, ಚೈತನ್ಯ ಮತ್ತು ಮತ್ತೊಬ್ಬ ಆರೋಪಿ ದೀಪೇನ್ ಚಾವ್ಡಾನ್ ಅವರನ್ನು ವಿಶೇಷ ನ್ಯಾಯಾಲಯ (ಭ್ರಷ್ಟಾಚಾರ ತಡೆ ಕಾಯ್ದೆ) ಮುಂದೆ ಹಾಜರುಪಡಿಸಲಾಗಿದ್ದು, ಇಬ್ಬರೂ ಅಕ್ಟೋಬರ್ 6ರವರೆಗೆ ಎಸಿಬಿ ಮತ್ತು ಇಒಡಬ್ಲ್ಯೂ ಕಸ್ಟಡಿಯಲ್ಲಿ ಇರುತ್ತಾರೆ.

ಎಸಿಬಿ ಮತ್ತು ಇಒಡಬ್ಲ್ಯೂ ಕಳೆದ ಜನವರಿಯಲ್ಲಿ ಪ್ರಕರಣ ದಾಖಲಿಸಿ ಭ್ರಷ್ಟಾಚಾರ ಮತ್ತು ಆರ್ಥಿಕ ಅಪರಾಧ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ 2019–2022 ನಡುವಿನ ಸಮಯದಲ್ಲಿ ಸುಮಾರು 2,500 ಕೋಟಿ ರೂ. ಮದ್ಯ ಹಗರಣ ನಡೆದಿದೆ ಎನ್ನಲಾಗಿದೆ.

ಚೈತನ್ಯ ವಕೀಲರು ಫೈಸಲ್ ರಿಜ್ವಿ, ಯಾವುದೇ ಸಾಕ್ಷಿ ಇಲ್ಲದೆ ಬಂಧನ ನಡೆದಿದ್ದು ಒತ್ತಡದ ತಂತ್ರ ಎಂದು ಆರೋಪಿಸಿದ್ದಾರೆ. ಮುಖ್ಯ ಮತ್ತು ಪೂರಕ ಆರೋಪಪಟ್ಟಿಗಳಲ್ಲಿ ಚೈತನ್ಯ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಇವುಗಳಲ್ಲಿ ಸುಮಾರು 45 ಜನರನ್ನು ಆರೋಪಿಗಳಾಗಿ ಗುರುತಿಸಲಾಗಿದೆ, ಆದರೆ 29ರನ್ನು ಬಂಧಿಸಲಾಗಿಲ್ಲ.

ಛತ್ತೀಸ್ಗಢ ಹೈಕೋರ್ಟ್ ಚೈತನ್ಯನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇತ್ತೀಚೆಗೆ ಲಕ್ಷ್ಮಿ ನಾರಾಯಣ್ ಬನ್ಸಾಲ್ ವಿರುದ್ಧ 1,000 ಕೋಟಿ ರೂ. ಹಗರಣದ ವಿಚಾರದಲ್ಲಿ ಹೇಳಿಕೆ ನೀಡಿದ್ದು, ಚೈತನ್ಯನ ಹೆಸರು ಆ ಚಾರ್ಜ್‌ಶೀಟ್‌ನಲ್ಲಿ ಇಲ್ಲ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page