Kodagu: ಮಡಿಕೇರಿ ನಗರದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್ (Raja Seat) ನಲ್ಲಿ ನಿರ್ಮಾಣಗೊಳ್ಳಬೇಕಿದ್ದ ಗ್ಲಾಸ್ ಬ್ರಿಡ್ಜ್ (Glass Bridge) ಯೋಜನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
15 ಕೋಟಿ ರೂ. ವೆಚ್ಚದಲ್ಲಿ ಗಾಜಿನ ಸೇತುವೆ ಮತ್ತು ಫುಡ್ ಕೋರ್ಟ್ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಟೆಂಡರ್ ಆಹ್ವಾನಿಸಿತ್ತು. ಆದರೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾದ ಕಾರಣ ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಿದೆ.
- ಮಡಿಕೇರಿ ಶಾಸಕ ಮಂತರ್ ಗೌಡ ಹೇಳುವಂತೆ,,
- ಗ್ಲಾಸ್ ಬ್ರಿಡ್ಜ್ ವಿರುದ್ಧ ಸಾರ್ವಜನಿಕ ವಿರೋಧ ಉಂಟಾಗಿದೆ.
- ಸೇತುವೆ ನಿರ್ಮಾಣವಾದರೆ ಪ್ರವಾಸಿಗರಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.
- ಈ ಕಾರಣಗಳಿಂದ ಸರ್ಕಾರ ಯೋಜನೆಯನ್ನು ರದ್ದು ಮಾಡಿದೆ.
ಕಾರಣ
- ಕೋಟ್ಯಂತರ ರೂ. ವೆಚ್ಚದ ಯೋಜನೆಗೆ ಹಲವು ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
- ಭೂ ವಿಜ್ಞಾನಿಗಳ ಪರಿಶೀಲನೆ, ಪರಿಸರ ಇಲಾಖೆಯ ಸಲಹೆ ಪಡೆಯದೇ ನೇರವಾಗಿ ಟೆಂಡರ್ ಆಹ್ವಾನಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.
ಈಗಲೇ ವಾರಾಂತ್ಯದಲ್ಲಿ ರಾಜಾಸೀಟ್ ಪ್ರವಾಸಿಗರಿಂದ ತುಂಬಿ ಹೋಗುತ್ತಿದೆ. ಗ್ಲಾಸ್ ಬ್ರಿಡ್ಜ್ ನಿರ್ಮಾಣವಾದರೆ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚುವದು.
ಇದರ ಪರಿಣಾಮವಾಗಿ ಪ್ರಕೃತಿ ಹಾನಿಯಾಗುವ ಜೊತೆಗೆ ಭೂಕುಸಿತದ ಅಪಾಯವೂ ಉಂಟಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.