Magadi, Ramanagara : ನಾಡಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಮಾಚಿದೇವ ಮಡಿವಾಳರ ಸಂಘದ ವತಿಯಿಂದ ಮಾಗಡಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ (Taluk Office) ಮಂಗಳವಾರ ಮಡಿವಾಳ ಮಾಚಿದೇವರ ಜಯಂತಿ (Madivala Machideva Jayanthi) ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಬಿ.ಜಿ. ಶ್ರೀನಿವಾಸಪ್ರಸಾದ್ “ಕಾಯಕವೇ ಭಕ್ತಿ, ಜೀವನದ ಉಸಿರು ಎಂದು ಮಾಚಿದೇವರು ನಂಬಿದ್ದರು. ವಚನ ಸಾಹಿತ್ಯ ರಕ್ಷಣೆಯ ಮಹಾ ದಂಡನಾಯಕರಾಗಿದ್ದ ಅವರ ವಚನಗಳನ್ನು ಓದುವ ಮೂಲಕ ನಾವೆಲ್ಲರೂ ಬದುಕನ್ನು ಹಸನು ಮಾಡಿಕೊಳ್ಳಬೇಕು. ಮಾಗಡಿಯ ಗೌರಮ್ಮನ ಕೆರೆಯ ಉತ್ತರದಲ್ಲಿರುವ ಮಾಚಿದೇವ ಮಡಿವಾಳರ ಪುರಾತನ ಗುಡಿ, ಮಡಿವಾಳರ ಮಡೀಕಟ್ಟೆ ಹಾಗೂ ಕಲ್ಲಿನ ಮಂಟಪದ ಸುತ್ತಲಿನ ಭೂಮಿಯನ್ನು ಸರ್ವೆ ಮಾಡಿಸಿ ಸಂಘಕ್ಕೆ ಮಂಜೂರು ಮಾಡಿಕೊಡಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ನಾಗರತ್ನಮ್ಮ ರಾಜಣ್ಣ, ಪುರಸಭೆ ನಾಮನಿರ್ದೇಶನ ಸದಸ್ಯ ಎಂ.ಟಿ. ಶಿವಣ್ಣ, ಸಂಘದ ಅಧ್ಯಕ್ಷ ಟಿ.ಎಂ. ಶ್ರೀನಿವಾಸ್, ಸಂಘದ ಕಾರ್ಯದರ್ಶಿ ಶಿವಕುಮಾರ್ ಎಚ್., ಶಿಕ್ಷಕ ಹರೀಶ್, ಸಂಘದ ಉಪಾಧ್ಯಕ್ಷರಾದ ಬಿ. ವೆಂಕಟರಾಮಯ್ಯ, ಪಿ. ರಾಜಣ್ಣ, ಖಜಾಂಚಿ ಕೆಂಚಪ್ಪ, ಕಾನೂನು ಸಲಹೆಗಾರ ಜಿ.ಕೆ. ಚಂದ್ರಶೇಖರ್, ಸಹ ಕಾರ್ಯದರ್ಶಿ ಬಿ.ಸಿ. ಚಂದ್ರಶೆಖರ್, ಮುಖಂಡರಾದ ಎನ್.ಇ.ಎಸ್. ರಮೇಶ್, ಯತೀಶ್, ಚಂದ್ರಪ್ಪ, ಗಿರೀಶ್, ಮಂಜುನಾಥ್, ಹರೀಶ್‌ಕುಮಾರ್, ರಂಗನಾಥ್, ಜಯರಾಮ್, ರವಿಕುಮಾರ್, ಧನಂಜಯ, ಗಿರೀಶ್, ಹರೀಶ್ ಟಿ.ಎನ್., ದೊಡ್ಡಸೋಮನಹಳ್ಳಿ ವಿಜಯಾ ಶ್ರೀನಿವಾಸಮೂರ್ತಿ, ತಿರುಮಲೆ ಮಂಜುಳಾ ಶ್ರೀನಿವಾಸ್, ರಾಧಾ ಗೋವಿಂದರಾಜು, ಮುನಿರತ್ನಮ್ಮ ಕೃಷ್ಣಕುಮಾರ್, ಬಾಲಾಜಿ ಉಪಸ್ಥಿತರಿದ್ದರು.