Chhatrapati Sambhajinagar: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ (Chhatrapati Sambhajinagar) ಮಹಾರಾಣಾ ಪ್ರತಾಪ್ ಅವರ ಎತ್ತರದ ಪ್ರತಿಮೆಯನ್ನು (statue of Maharana Pratap) ಅನಾವರಣ ಮಾಡಿದ ನಂತರ ನಡೆದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದರು. ಅವರು ಹೇಳಿದ್ದಾರೆ.
ಮಹಾರಾಣಾ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರೇ ನಮ್ಮ ನಿಜವಾದ ಹೀರೋಗಳು. ಔರಂಗಜೇಬ್ ಅಥವಾ ಬಾಬರ್ ಅವರನ್ನು ಮಹಿಮೆಪಡಿಸುವುದು ದೇಶದ ಮುಸ್ಲಿಮರನ್ನು ಅವಮಾನಿಸುವಂತಾಗಿದೆ.
ಮಹಾರಾಣಾ ಪ್ರತಾಪ್ ಧೈರ್ಯ ಮತ್ತು ದೇಶಭಕ್ತಿಯ ಪ್ರತಿಕೆಯಾಗಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಣಾ ಪ್ರತಾಪ್ ಅವರಿಂದ ಸ್ಫೂರ್ತಿ ಪಡೆದಿದ್ದರು, ವಿಶೇಷವಾಗಿ ಗೆರಿಲ್ಲಾ ಯುದ್ಧ ತಂತ್ರದಲ್ಲಿ.
ಸ್ವಾತಂತ್ರ್ಯಾನಂತರ ಎಡಪಂಥೀಯ ಇತಿಹಾಸಕಾರರು ಈ ಮಹಾನ್ ನಾಯಕರಿಗೆ ಬೇಕಾದ ಗೌರವ ನೀಡಿಲ್ಲ. ಬದಲಾಗಿ ಔರಂಗಜೇಬನನ್ನು ಶ್ಲಾಘಿಸಿದ್ದಾರೆ ಎಂಬ ಟೀಕೆ ರಾಜನಾಥ್ ಸಿಂಗ್ ಅವರದು.
ಮಹಾರಾಣಾ ಪ್ರತಾಪ್ ತನ್ನ ಸ್ವಾಭಿಮಾನಕ್ಕಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದರು. ಅವರು ಇಸ್ಲಾಂ ಅಥವಾ ಮುಸ್ಲಿಂ ವಿರೋಧಿಗಳಾಗಿರಲಿಲ್ಲ.
ಹಲ್ದಿಘಾಟಿ ಯುದ್ಧದಲ್ಲಿ ಹಕೀಮ್ ಖಾನ್ ಸೂರಿ ಎಂಬ ಮುಸ್ಲಿಂ ಮಹಾರಾಣಾ ಪ್ರತಾಪ್ ಅವರ ಪಕ್ಕದಲ್ಲೇ ಹೋರಾಡಿದ್ದರು. ಶಿವಾಜಿ ಮಹಾರಾಜರ ಸೈನ್ಯದಲ್ಲಿಯೂ ಹಾಗೂ ಅವರ ನಂಬಿಗಸ್ತರಲ್ಲಿಯೂ ಮುಸ್ಲಿಂ ಸಮುದಾಯದವರು ಇದ್ದರು.
“ಅಂತಹ ನಾಯಕರು ನಮ್ಮ ದೇಶದ ನಿಜವಾದ ವೀರರು. ಅವರನ್ನು ನಮ್ಮ ಆದರ್ಶಗುರಿಯಾಗಿಸಿಕೊಳ್ಳಬೇಕು” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.