Bengaluru: ಮಹಾರಾಣಿ ಟ್ರೋಫಿಯ ಮೊದಲ (Maharani Cricket League) ಆವೃತ್ತಿಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಟೂರ್ನಿ ಆಗಸ್ಟ್ 4ರಿಂದ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ಆರಂಭವಾಗಿ, ಫೈನಲ್ ಆಗಸ್ಟ್ 10ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಟೀಂಗಳು ಆಯ್ಕೆ ಮಾಡಿದ ಆಟಗಾರ್ತಿಯರು: ಹರಾಜಿನಲ್ಲಿ ಐದು ಫ್ರಾಂಚೈಸಿಗಳು—ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಮಂಗಳೂರು ಡ್ರಾಗನ್ಸ್, ಮೈಸೂರು ವಾರಿಯರ್ಸ್ ಮತ್ತು ಶಿವಮೊಗ್ಗ ಲಯನೆಸ್ ತಲಾ ₹10 ಲಕ್ಷ ಮೊತ್ತದಲ್ಲಿ 16 ಆಟಗಾರ್ತಿಯರ ಬಲಿಷ್ಠ ತಂಡಗಳನ್ನು ನಿರ್ಮಿಸಿವೆ.
ದುಬಾರಿ ಆಟಗಾರ್ತಿಯರು
- ನಿಕಿ ಪ್ರಸಾದ್: ₹3.70 ಲಕ್ಷಕ್ಕೆ ಬೆಂಗಳೂರು ಬ್ಲಾಸ್ಟರ್ಸ್ ತಂಡ ಸೇರಿದರು.
- ಶುಭಾ ಸತೀಶ್: ₹3.10 ಲಕ್ಷಕ್ಕೆ ಮೈಸೂರು ವಾರಿಯರ್ಸ್ ಪಾಲಾದರು.
- ಮಿಥಿಲಾ ವಿನೋದ್: ₹3.00 ಲಕ್ಷಕ್ಕೆ ಶಿವಮೊಗ್ಗ ಲಯನೆಸ್ ತಂಡ ಸೇರಿದರು.
- ಬೆಂಗಳೂರು ಬ್ಲಾಸ್ಟರ್ಸ್ ಆಟಗಾರ್ತಿಯರು
- ನಿಕಿ ಪ್ರಸಾದ್ (₹3.70 ಲಕ್ಷ)
- ಕಂಡಿಕುಪ್ಪ ಕಾಶ್ವಿ (₹1.55 ಲಕ್ಷ)
- ಅದಿತಿ ರಾಜೇಶ್ (₹1.50 ಲಕ್ಷ)
- ಚಾಂದಸಿ ಕೃಷ್ಣಮೂರ್ತಿ (₹70 ಸಾವಿರ)
- ಪುಷ್ಪಾ ಕಿರೇಸೂರ್ (₹40 ಸಾವಿರ)
- ಹುಬ್ಬಳ್ಳಿ ಟೈಗರ್ಸ್ ಆಯ್ಕೆ
- ಬಿ.ಜಿ. ತೇಜಸ್ವಿನಿ (₹1.50 ಲಕ್ಷ)
- ಭಾವಿಕಾ ರೆಡ್ಡಿ (₹1.10 ಲಕ್ಷ)
- ರಾಜೇಶ್ವರಿ ಗಾಯಕ್ವಾಡ್, ಶ್ರೇಯಾ ಚವಾಣ್, ಕೃಷಿಕಾ ರೆಡ್ಡಿ (ತಲಾ ₹1.00 ಲಕ್ಷ)
- ಮಂಗಳೂರು ಡ್ರಾಗನ್ಸ್ ತಂಡ
- ಲಿಯಾಂಕ ಶೆಟ್ಟಿ (₹2.25 ಲಕ್ಷ)
- ಪ್ರತ್ಯೂಷ ಕುಮಾರ್ (₹1.80 ಲಕ್ಷ)
- ಇಂಚರ ಸಿ.ಯು (₹1.55 ಲಕ್ಷ)
- ಕಾರ್ಣಿಕ ಕಾರ್ತಿಕ್ (₹1.25 ಲಕ್ಷ)
- ಸಲೋನಿ ಪಿ (₹85 ಸಾವಿರ)
- ಮೈಸೂರು ವಾರಿಯರ್ಸ್ ಆಯ್ಕೆ
- ಶುಭಾ ಸತೀಶ್ (₹3.10 ಲಕ್ಷ)
- ಪ್ರಕೃತಿ ಎನ್.ಜಿ (₹1.20 ಲಕ್ಷ)
- ಪೂಜಾ ಕುಮಾರಿ ಎಂ. (₹1.05 ಲಕ್ಷ)
- ಸಹನಾ ಎಸ್. ಪವಾರ್ (₹1.00 ಲಕ್ಷ)
- ರಚಿತಾ ಹತ್ವಾರ್ (₹85 ಸಾವಿರ)
- ಶಿವಮೊಗ್ಗ ಲಯನೆಸ್ ಆಯ್ಕೆ
- ಮಿಥಿಲಾ ವಿನೋದ್ (₹3.00 ಲಕ್ಷ)
- ಲಾವಣ್ಯ ಚಲನ (₹1.45 ಲಕ್ಷ)
- ರೋಶಿನಿ ಕಿರಣ್ (₹1.30 ಲಕ್ಷ)
- ಸೌಮ್ಯ ವರ್ಮಾ (₹1.05 ಲಕ್ಷ)
- ಶ್ರೀನಿತಿ ಪಿ.ರೈ (₹80 ಸಾವಿರ)
ಈ ಬಾರಿ ಮೊದಲ ಬಾರಿಗೆ ನಡೆಯುತ್ತಿರುವ ಈ ಲೀಗ್ ಮೂಲಕ ಮಹಿಳಾ ಕ್ರಿಕೆಟ್‌ಗೆ ಹೊಸ ಉತ್ಸಾಹ ಮತ್ತು ಅವಕಾಶ ಸಿಕ್ಕಿದೆ.