ಫಿನ್ಲೆಂಡ್ ಕ್ರಿಕೆಟ್ ಆಟಗಾರ ಮಹೇಶ್ ತಾಂಬೆ (Mahesh Tambe) ಅವರು ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಕೇವಲ 8 ಎಸೆತಗಳಲ್ಲಿ 5 ವಿಕೆಟ್‌ಗಳನ್ನು ಪಡೆದು ಹೊಸ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಈ ಸಾಧನೆ ಫಿನ್ಲೆಂಡ್ ಮತ್ತು ಎಸ್ಟೋನಿಯಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ನಡೆದಿದೆ.
ಎಸ್ಟೋನಿಯಾ ವಿರುದ್ಧದ ಪಂದ್ಯದಲ್ಲಿ ತಾಂಬೆ 1.2 ಓವರ್‌ಗಳಲ್ಲಿ ಸಾಹಿಲ್ ಚೌಹಾಣ್, ಸ್ಟೀಪನ್ ಗೂಚ್, ರೂಪಮ್ ಬರುವಾ, ಮೊಹಮ್ಮದ್ ಉಸ್ಮಾನ್ ಮತ್ತು ಪ್ರಣಯ್ ಗೀವಾಲಾ ಎಂಬ ಐದು ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದರು. ಅವರು 2 ಓವರ್‌ಗಳಲ್ಲಿ 19 ರನ್ ನೀಡಿ 5 ವಿಕೆಟ್ ಪಡೆದರು.
ಈಗಾಗಲೇ ಜುನೈದ್ ಅಜೀಜ್ (ಬಹ್ರೇನ್) 2022ರಲ್ಲಿ 10 ಎಸೆತಗಳಲ್ಲಿ 5 ವಿಕೆಟ್ ಪಡೆದ ದಾಖಲೆ ಹೊಂದಿದ್ದರೆ, ತಾಂಬೆ ಅವರ ಈ ಸಾಧನೆಯಿಂದ ಆ ದಾಖಲೆಯನ್ನು ಮರೆಮಾಡಲಾಗಿದೆ.
ಈ ಪಂದ್ಯದಲ್ಲಿ ಎಸ್ಟೋನಿಯಾ ಮೊದಲಿಗೆ ಬ್ಯಾಟ್ ಮಾಡಿ 141 ರನ್‌ಗೆ ಆಲೌಟ್ ಆಯಿತು. ಫಿನ್ಲೆಂಡ್ ತಂಡ 18.1 ಓವರ್‌ಗಳಲ್ಲಿ ಗುರಿಯನ್ನು ತಲುಪಿ 5 ವಿಕೆಟ್‌ಗಳಿಂದ ಗೆದ್ದಿತು. ಅರವಿಂದ್ ಮೋಹನ್ 67 ರನ್‌ಗಳೊಂದಿಗೆ ಉತ್ತಮ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಎಸ್ಟೋನಿಯಾದ ಸಾಹಿಲ್ ಚೌಹಾಣ್ ಅವರು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ ಶತಕ ಸಿಡಿಸಿದ್ದ ದಾಖಲೆ ಹೊಂದಿದ್ದಾರೆ. ಅವರು ಸಿಪ್ರಾಸ್ ವಿರುದ್ಧ 144 ರನ್ ಗಳಿಸಿದ್ದರು.
ಕಡಿಮೆ ಎಸೆತಗಳಲ್ಲಿ ಐದು ವಿಕೆಟ್ ಪಡೆದ ಪ್ರಮುಖ ಬೌಲರ್‌ಗಳು
- ಮಹೇಶ್ ತಾಂಬೆ (ಫಿನ್ಲೆಂಡ್) – 8 ಎಸೆತ
- ಜುನೈದ್ ಅಜೀಜ್ (ಬಹ್ರೇನ್) – 10 ಎಸೆತ
- ರಶೀದ್ ಖಾನ್ (ಅಫ್ಘಾನಿಸ್ತಾನ), ಮೋಝಮ್ ಬೇಗ್ (ಮಲಾವಿ), ಖಿಜರ್ ಹಯಾತ್ (ಮಲೇಷ್ಯಾ) – 11 ಎಸೆತ
ಇದು ಟಿ-20 ಇತಿಹಾಸದಲ್ಲೇ ಅತ್ಯಂತ ದ್ರುತಗತಿಯಲ್ಲಿ ಸಾಧನೆ ಮಾಡಿದ ಅಪರೂಪದ ಘಟನೆಯಾಗಿದೆ.