Mahindra and Warner Bros ಜಂಟಿಯಾಗಿ BE 6 Batman ಎಡಿಷನ್ ಎಂಬ ವಿಶೇಷ ಕಾರನ್ನು ಬಿಡುಗಡೆ ಮಾಡಿವೆ. ಮ್ಯಾಟ್ ಬ್ಲ್ಯಾಕ್ ಬಣ್ಣ, ಕಸ್ಟಮ್ ಡೆಕಲ್ಸ್ ಮತ್ತು ಪ್ರೀಮಿಯಂ ಇಂಟೀರಿಯರ್ ಹೊಂದಿರುವ ಈ ಕಾರಿನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳಿವೆ. ಇದು ಕೇವಲ 300 ಜನರಿಗೆ ಮಾತ್ರ ಲಭ್ಯ.
ಬೆಲೆ ಮತ್ತು ಬಿಡುಗಡೆ ದಿನಾಂಕ: ಈ ಕಾರಿನ ಎಕ್ಸ್-ಶೋರೂಂ ಬೆಲೆ ₹27.79 ಲಕ್ಷ. ಬುಕಿಂಗ್ ಆಗಸ್ಟ್ 23 ರಿಂದ ಪ್ರಾರಂಭವಾಗುತ್ತಿದ್ದು, ಡೆಲಿವರಿ ಅಂತರರಾಷ್ಟ್ರೀಯ ಬ್ಯಾಟ್ಮ್ಯಾನ್ ದಿನವಾದ ಸೆಪ್ಟೆಂಬರ್ 20ರಂದು ನಡೆಯಲಿದೆ.
ವಿಶೇಷ ವಿನ್ಯಾಸ
- ಸ್ಯಾಟಿನ್ ಬ್ಲ್ಯಾಕ್ ಕಲರ್
- ಫ್ರಂಟ್ ಡೋರ್‌ಗಳಲ್ಲಿ Batman ಡೆಕಲ್ಸ್
- ರಿಯರ್ ಡೋರ್‌ಗಳಲ್ಲಿ ದಿ ಡಾರ್ಕ್ ನೈಟ್ ಬ್ಯಾಡ್ಜಿಂಗ್
- ಫೆಂಡರ್, ಹಬ್ ಕ್ಯಾಪ್ಸ್, ಹಿಂಭಾಗ ಬಂಪರ್‌ನಲ್ಲಿ ಬ್ಯಾಟ್ ಲೋಗೋ
- 20-ಇಂಚಿನ ಅಲಾಯ್ ವೀಲ್ಸ್
- ಗೋಲ್ಡ್ ಕಲರ್ ಸಸ್ಪೆನ್ಷನ್ ಮತ್ತು ಬ್ರೇಕ್ ಕ್ಯಾಲಿಪರ್‌ಗಳು
- ಬ್ಯಾಟ್ ಲೋಗೋ ಹೊಂದಿರುವ ವಿಂಡೋಸ್, ರೂಫ್, ರಿಯರ್ ವಿಂಡ್ಸ್‌ಸ್ಕ್ರೀನ್
ಇಂಟೀರಿಯರ್ ಹೈಲೈಟ್ಸ್
- ಚಾರ್ಕೋಲ್ ಲೇದರ್ ಇನ್ಸ್ಟ್ರುಮೆಂಟ್ ಪ್ಯಾನೆಲ್
- ಗೋಲ್ಡ್ ಅಕ್ಸೆಂಟ್ ಸ್ಟೀರಿಂಗ್ ವೀಲ್, ಇನ್-ಟಚ್ ಕಂಟ್ರೋಲರ್
- ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್
- ಸೀಟ್ಸ್, ಬೂಸ್ಟ್ ಬಟನ್‌ನಲ್ಲಿ ಎಂಬೋಸ್ಡ್ ಬ್ಯಾಟ್ ಸಹಿ
- ಇನ್ಫೋಟೈನ್ಮೆಂಟ್‌ನಲ್ಲಿ ಬ್ಯಾಟ್ಮ್ಯಾನ್ ವೆಲ್ಕಮ್ ಅನಿಮೇಷನ್
- ಬ್ಯಾಟ್ಮ್ಯಾನ್ ಥೀಮ್ ಎಕ್ಸ್‌ಟೀರಿಯರ್ ಸೌಂಡ್ ಪ್ರೊಫೈಲ್
ಬುಕಿಂಗ್ ಮತ್ತು ಡೆಲಿವರಿ: ಆಗಸ್ಟ್ 23ರಿಂದ ಬುಕಿಂಗ್ ಪ್ರಾರಂಭ. ಸೆಪ್ಟೆಂಬರ್ 20ರಿಂದ ಡೆಲಿವರಿ. 300 ಯುನಿಟ್‌ಗಳಷ್ಟೇ ಇರುವ ಈ ಕಾರು Batman ಅಭಿಮಾನಿಗಳಿಗೆ ಸಂಗ್ರಹಯೋಗ್ಯ ಮಾದರಿ.