ಮಹೀಂದ್ರಾ ಕಂಪನಿಯು XEV 9e (Mahindra XEV 9e) ಮತ್ತು BE 6e ಎಂಬ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದ್ದು, ಇದರ ಮೂಲಕ ಟಾಟಾ ಮುಂತಾದ ಕಂಪನಿಗಳಿಗೆ ಗಂಭೀರ ಸ್ಪರ್ಧೆಯನ್ನು ಒದಗಿಸಿದೆ. XEV 9e ಎಲೆಕ್ಟ್ರಿಕ್ ಕಾರಿನ ಟಾಪ್ ಎಂಡ್ ಮಾದರಿಯ ಎಕ್ಸ್ ಶೋರೂಂ ಬೆಲೆ ₹30.50 ಲಕ್ಷ.
ಈ ಎರಡು ಕಾರುಗಳನ್ನು ಮಹೀಂದ್ರಾ 2025ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಿದೆ. ಇವು INGLO ಪ್ಲಾಟ್‌ಫಾರ್ಮ್ ಆಧಾರಿತ ಕಾರುಗಳಾಗಿದ್ದು, ವಿನ್ಯಾಸದಲ್ಲಿ ವಿಭಿನ್ನವಾಗಿ ತಯಾರಾಗಿದೆ.
Features
- 59kWh ಮತ್ತು 79kWh ಬ್ಯಾಟರಿಗಳು
- 59kWh: 228 bhp ಪವರ್.
- 79kWh: 281 bhp ಪವರ್.
- 79kWh ಕಾರು 6.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗ ಹೊಂದುತ್ತದೆ.
- ರೇಂಜ್
- MIDC: 656 ಕಿ.ಮೀ.
- WLTP: 533 ಕಿ.ಮೀ.
- ಫಾಸ್ಟ್ ಚಾರ್ಜಿಂಗ್
- 175kWh DC ಚಾರ್ಜಿಂಗ್ ಮೂಲಕ 20% – 80% ಕೇವಲ 20 ನಿಮಿಷಗಳಲ್ಲಿ.
- ವಿಶಿಷ್ಟ ವಿನ್ಯಾಸ ಮತ್ತು ತಂತ್ರಜ್ಞಾನ
- ಬೋಲ್ಡ್ ಶೋಲ್ಡರ್ ಲೈನ್, ಸ್ಲಿಮ್ LED ಟೈಲ್‌ಲ್ಯಾಂಪ್, ಬ್ಲ್ಯಾಕ್ ಕ್ಲಾಡಿಂಗ್.
- ಮೂರು 12.3-ಇಂಚಿನ ಡಿಸ್‌ಪ್ಲೇಗಳು (1920×720 ರೆಸಲ್ಯೂಶನ್).
- Adrenox ಸಾಫ್ಟ್‌ವೇರ್.
- ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಡ್ರೈವ್ ಮೋಡ್ ಗಳು.
- ಫೀಚರ್ಸ್ ಮತ್ತು ಸುರಕ್ಷತೆ
- ಲೆವೆಲ್ 2 ADAS ತಂತ್ರಜ್ಞಾನ.
- ಹೆಡ್-ಅಪ್ ಡಿಸ್‌ಪ್ಲೇ, ಡಾಲ್ಬಿ ಅಟ್ಮಾಸ್ನೊಂದಿಗೆ 16 ಸ್ಪೀಕರ್ ಸಿಸ್ಟಮ್.
- ಪನೊರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ.
- ಏಳು ಏರ್‌ಬ್ಯಾಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್.
- ಗಾತ್ರ ಮತ್ತು ಬೂಟ್ ಸ್ಪೇಸ್
- ಉದ್ದ: 4,790mm
- ಅಗಲ: 1,905mm
- ಎತ್ತರ: 1,690mm
- ವೀಲ್ಬೇಸ್: 2,750mm
- ಬೂಟ್ ಸ್ಪೇಸ್: 665 ಲೀಟರ್
ಇದು ತಂತ್ರಜ್ಞಾನ ಮತ್ತು ಸುರಕ್ಷತೆಯ ಹೊಸ ಪರಿಮಾಣವನ್ನು ನೀಡಲಿದ್ದು, ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗೆ ಹೊಸ ಮಟ್ಟವನ್ನು ಸ್ಥಾಪಿಸುತ್ತದೆ.