
Bengaluru: ನಿಮಗೆ Instagram reels ಮಾಡೋದರಲ್ಲಿ ಆಸಕ್ತಿ ಇದ್ದರೆ, ನಿಮಗಾಗಿ ಉತ್ತಮ ಅವಕಾಶವಿದೆ! ಭಾರತ ಸರ್ಕಾರ “ಡಿಜಿಟಲ್ ಇಂಡಿಯಾ ರೀಲ್ ಸ್ಪರ್ಧೆ” ಎಂಬ ಹೊಸ ಸ್ಪರ್ಧೆಯನ್ನು ಘೋಷಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ₹15,000 ವರೆಗೆ ಬಹುಮಾನ ಗೆಲ್ಲಬಹುದು!
ಈ ಸ್ಪರ್ಧೆ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ 10 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು 1 ನಿಮಿಷದ ವಿಡಿಯೋ (ರೀಲ್) ತಯಾರಿಸಬೇಕು. ಈ ರೀಲ್‌ನಲ್ಲಿ ನೀವು ಡಿಜಿಟಲ್ ಸೇವೆಗಳು – ಇ-ಆಸ್ಪತ್ರೆ, ಯುಪಿಐ ಪಾವತಿ, ಡಿಜಿಲಾಕರ್, online ಶಿಕ್ಷಣ ಮುಂತಾದವುಗಳಿಂದ ನಿಮಗೆ ಹೇಗೆ ಸಹಾಯವಾಗಿದೆ ಎಂಬುದನ್ನು ಹಂಚಿಕೊಳ್ಳಬೇಕು.
ಬಹುಮಾನ ವಿವರ
- ಮೊದಲ 10 ಜನರಿಗೆ ₹15,000
- ಮುಂದಿನ 25 ಜನರಿಗೆ ₹10,000
- ಇನ್ನೂ 50 ಜನರಿಗೆ ₹5,000
ವಿಡಿಯೋ ತಯಾರಿ ನಿಯಮಗಳು
- ಗರಿಷ್ಠ ಉದ್ದ: 1 ನಿಮಿಷ
- Format: MP4
- ಆಕಾರ: ಪೋರ್ಟ್ರೇಟ್ (mobile reel style-Portrait)
- ಭಾಷೆ: ಕನ್ನಡ, ಇಂಗ್ಲಿಷ್ ಅಥವಾ ಯಾವುದೇ ಭಾರತೀಯ ಭಾಷೆ
- ವಿಡಿಯೋ ಮೊದಲು ಎಲ್ಲಿಯೂ ಪೋಸ್ಟ್ ಮಾಡಿರಬಾರದು.
ಅರ್ಜಿಯ ವಿಧಾನ
- https://innovateindia.mygov.in website ಗೆ ಹೋಗಿ
- “ಡಿಜಿಟಲ್ ಇಂಡಿಯಾ ರೀಲ್ ಸ್ಪರ್ಧೆಯ ದಶಕ” ಆಯ್ಕೆ ಮಾಡಿ
- ನಿಮ್ಮ ವಿಡಿಯೋ upload ಮಾಡಿ
- ನಿಮ್ಮ ಅನುಭವದ ಬಗ್ಗೆ ಸಣ್ಣ ವಿವರಣೆ ಕೊಡಿ