Home Karnataka Mandya ವಿದ್ಯುತ್ Short Circuit, ಅಂಗಡಿಗಳು ಬೆಂಕಿಗಾಹುತಿ

ವಿದ್ಯುತ್ Short Circuit, ಅಂಗಡಿಗಳು ಬೆಂಕಿಗಾಹುತಿ

Mandya Koppa Electric Short Circuit

Mandya : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ (Electric Short Circuit) ನಿಂದ ಕೊಪ್ಪದ (Koppa) ಟಿ.ಬಳ್ಳೆಕೆರೆ ವೃತ್ತದಲ್ಲಿ ಕೊಪ್ಪ ಹನುಮೇಗೌಡ ಅವರಿಗೆ ಸೇರಿದ ಆಟೊ ಪಾರ್ಟ್ಸ್, ಜುಬೇರಾ ಅವರಿಗೆ ಸೇರಿದ ಗ್ಯಾರೇಜ್ ಮತ್ತು ಟಿ.ಬಳ್ಳೇಕೆರೆ ಗ್ರಾಮದ ಯೋಗಾನಂದ ಅವರಿಗೆ ಸೇರಿದ ಕೋಳಿ ಅಂಗಡಿ ಸೋಮವಾರ ಮಧ್ಯಾಹ್ನ ಬೆಂಕಿಗಾಹುತಿಯಾಗಿವೆ.

ಅಂಗಡಿಯ ಮುಂದೆ ಹಾದುಹೋಗಿರುವ ಹೈಟೆನ್ಷನ್‌ ವಿದ್ಯುತ್ ತಂತಿಗಳು ಗಾಳಿಗೆ ಒಂದಕ್ಕೊಂದು ಸ್ಪರ್ಶಿಸಿ ಅವಘಡ ಉಂಟಾಗಿದೆ ಎನ್ನಲಾಗಿದ್ದು ಅದೃಷ್ಟವಷಾತ್ ಸಮೀಏಪದಲ್ಲೇ ಇದ್ದ ವೈದ್ಯನಾಥೇಶ್ವರ ಪೆಟ್ರೋಲ್ ಬಂಕ್‌ಗೆ ಯಾವುದೇ ಹಾನಿಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಅಪಾಯವಾಗುವುದನ್ನು ತಪ್ಪಿಸಿದ್ದಾರೆ.

ಆಟೊ ಪಾರ್ಟ್ಸ್‌ನಲ್ಲಿದ್ದ ₹ 8 ಲಕ್ಷ ಮೌಲ್ಯದ ವಸ್ತುಗಳು, ಗ್ಯಾರೇಜ್‌ನಲ್ಲಿದ್ದ ₹ 3, ಕೋಳಿ ಅಂಗಡಿಯಲ್ಲಿದ್ದ ₹ 1.5 ಲಕ್ಷ ಸೇರಿ ₹ 12.5 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು ಅಂಗಡಿಗಳನ್ನೇ ನಂಬಿ ಜೀವನ ಮಾಡುತ್ತಿದ್ದ ನಮಗೆ ನಷ್ಟವಾಗಿದೆ.ವಿದ್ಯುತ್ ಇಲಾಖೆ ಮತ್ತು ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅಂಗಡಿಗಳ ಮಾಲೀಕರು ಕೋರಿದರು.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version