Search
WhatsApp alerts

Home › Dakshina Kannada

ಪೊಲೀಸರ ಬಳಗಕ್ಕೆ “Charlie”

administrator · Published · Updated

Mangalore Police Dog Squad Charlie

Mangaluru : ರಕ್ಷಿತ್‌ ಶೆಟ್ಟಿ ಅಭಿನಯದ ‘777 Charlie‘ ಸಿನಿಮಾದಿಂದ ಪ್ರಭಾವಿತರಾದ ಮಂಗಳೂರು ನಗರದ ಪೊಲೀಸರು ಶ್ವಾನ ದಳದ (Mangalore Police Dog Squad) ಹೊಸ ಮೂರು ತಿಂಗಳ ಲ್ಯಾಬ್ರಡಾರ್‌ ರಿಟ್ರೀವರ್‌ ತಳಿಯ ನಾಯಿಮರಿಗೆ ‘ಚಾರ್ಲಿ’ ಎಂದು ಶುಕ್ರವಾರ ನಗರ ಪೊಲೀಸ್‌ ಕಮಿಷನರ್‌ ಅವರ ಕಚೇರಿ ಬಳಿ ನಾಮಕರಣ ಮಾಡಿದರು.

ಇತ್ತೀಚೆಗಷ್ಟೇ ಬಂಟ್ವಾಳದ ಮಾಲೀಕರೊಬ್ಬರಿಂದ ಈ ನಾಯಿಮರಿಯನ್ನು ಪೊಲೀಸ್‌ ಶ್ವಾನದಳಕ್ಕೆ ಖರೀದಿಸಲಾಗಿತ್ತು. ಗುರುವಾರ ಶ್ವಾನದಳದ ನಾಲ್ವರು ಸಿಬ್ಬಂದಿ ‘777 ಚಾರ್ಲಿ‘ ಸಿನಿಮಾದ ಪ್ರೀಮಿಯರ್‌ ಶೋವನ್ನು ವೀಕ್ಷಿಸಿ ನಮ್ಮಲ್ಲಿರುವ ನಾಯಿ ಮರಿಗೂ ಚಾರ್ಲಿ ಎಂದು ಹೆಸರಿಡೋಣ ಎಂಬ ಪ್ರಸ್ತಾವನೆಯನ್ನು ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ರವರ ಮುಂದಿಟ್ಟಾಗ ಅವರು ಸಮ್ಮತಿ ಸೂಚಿಸಿದರು.

ಬೆಂಗಳೂರಿನ ನಗರ ಸಶಸ್ತ್ರ ಮೀಸಲು ಪಡೆಯ (ದಕ್ಷಿಣ) ತರಬೇತುದಾರರಿಂದ ಚಾರ್ಲಿಗೂ 6 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page