ದೆಹಲಿಯ ಯಮುನಾ ನದಿಯ ಸಮೀಪದ ಕಿಸಾನ್ ಘಾಟ್ ಮತ್ತು ರಾಷ್ಟ್ರೀಯ ಸ್ಮೃತಿ ಸ್ಥಳಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕ (Manmohan Singh Memorial) ನಿರ್ಮಾಣಕ್ಕೆ ಸ್ಥಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಕಿಸಾನ್ ಘಾಟ್ ಎನ್ನುವುದು ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಸ್ಮಾರಕವಾಗಿದ್ದು, ರಾಷ್ಟ್ರೀಯ ಸ್ಮೃತಿ ಸ್ಥಳವು ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಹಾಗೂ ಪ್ರಧಾನಿಗಳ ಸ್ಮಾರಕಗಳಿಗೆ ಮೀಸಲಾಗಿರುವ ಪ್ರದೇಶವಾಗಿದೆ.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, “ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಇನ್ನೂ ಇಬ್ಬರ ಸ್ಮಾರಕ ನಿರ್ಮಾಣಕ್ಕೆ ಮಾತ್ರ ಸ್ಥಳವಿದೆ. ಈ ಸ್ಥಳಾವಕಾಶವನ್ನು ಜಾಣ್ಮೆಯಿಂದ ಬಳಸಲು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ರಾಜ್ ಘಾಟ್, ಶಾಂತಿ ವನ, ಶಕ್ತಿ ಸ್ಥಳ, ವೀರ ಭೂಮಿ ಸೇರಿ 245 ಎಕರೆ ಜಾಗವನ್ನು ಪ್ರಮುಖ ನಾಯಕರ ಸ್ಮಾರಕಗಳಿಗೆ ಮೀಸಲು ಇಡಲಾಗಿದೆ.