back to top
21.4 C
Bengaluru
Friday, October 10, 2025
HomeChikkaballapuraSidlaghattaಹುತಾತ್ಮ ಯೋಧ ಎಂ.ಗಂಗಾಧರ್ ಪುಣ್ಯ ಸ್ಮರಣೆಯ ಅಂಗವಾಗಿ ರಕ್ತದಾನ

ಹುತಾತ್ಮ ಯೋಧ ಎಂ.ಗಂಗಾಧರ್ ಪುಣ್ಯ ಸ್ಮರಣೆಯ ಅಂಗವಾಗಿ ರಕ್ತದಾನ

- Advertisement -
- Advertisement -

Yannanguru, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ, ಹುತಾತ್ಮ ಯೋಧ ಎಂ.ಗಂಗಾಧರ್ ಅವರ 8 ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ವಿಜಯಪುರ ಜೇಸಿಐ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. 40 ಯೂನಿಟ್ ರಕ್ತವನ್ನು ಸಂಗ್ರಹ ಮಾಡಿದರು.

ಹುತಾತ್ಮ ಯೋಧನ ಸಮಾಧಿಗೆ ತೆರಳಿದ ಗ್ರಾಮಸ್ಥರು ಹಾಗೂ ಅವರ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ರಕ್ತದಾನ ಶಿಬಿರ ಆರಂಭಿಸಿದರು.

ಹುತಾತ್ಮ ಯೋಧ ಎಂ.ಗಂಗಾಧರ್ ಅವರ ತಮ್ಮ ಯೋಧ ರವಿಕುಮಾರ್ ಮಾತನಾಡಿ, ದೇಶ ಸೇವೆ ಮಾಡುವಂತಹ ಅವಕಾಶ ಪ್ರತಿಯೊಬ್ಬರಿಗೂ ಇದೆ. ಆದರೆ, ಅದನ್ನು ಸದುಪಯೋಗ ಮಾಡಿಕೊಳ್ಳುವವರು ಕೆಲವರು ಮಾತ್ರ. ನನ್ನ ಸಹೋದರ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿ, ಹುತಾತ್ಮನಾಗಿರುವುದು, ನಮ್ಮೆಲ್ಲರಿಗೂ ಹೆಮ್ಮೆಯಿದೆ. ನಾನೂ ಸಹಾ ಸೇನೆಯಲ್ಲಿದ್ದೇನೆ. ಕಳೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವೇಳೆ ಗಾಯಗೊಂಡಿದ್ದ ನಾನು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದೇನೆ. ದೇಶಕ್ಕಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದಾಗ ಯಾರೂ ಅದನ್ನು ಕಳೆದುಕೊಳ್ಳಬಾರದು. ಯೋಧರಿಗೆ ಜನರು ತೋರಿಸುವ ಪ್ರೀತಿ, ವಿಶ್ವಾಸ, ಅವರು ತುಂಬಿಸುವ ಆತ್ಮಸ್ಥೈರ್ಯವೇ ಹೆಚ್ಚು ಶಕ್ತಿ ಕೊಡುತ್ತದೆ ಎಂದರು.

ಜೇಸಿಐ ವಿಜಯಪುರ ವಲಯ-14 ರ ಅಧ್ಯಕ್ಷೆ ಶೀಲಾಬೈರೇಗೌಡ, ಅವರು ಮಾತನಾಡಿ, ದೇಶವನ್ನು ಕಾಯುವಂತಹ ಸೈನಿಕರ ಶ್ರಮದಿಂದ ನಾವಿನ್ನೂ ನೆಮ್ಮದಿಯಾಗಿದ್ದೇವೆ. ಅವರ ಸೇವೆಯನ್ನು ನಾವ್ಯಾರು ಮರೆಯಬಾರದು. ರಕ್ತದ ಕೊರತೆಯಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ರಕ್ತವನ್ನು ಎಲ್ಲಿಯೂ ತಯಾರಿಸಲು ಸಾಧ್ಯವಿಲ್ಲ. ಅದನ್ನು ಆರೋಗ್ಯವಂತರಿಂದ ಪಡೆಯಲು ಅವಕಾಶವಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದರು. ಜೇಸಿಐ ಸಂಸ್ಥೆಯ 20 ಕ್ಕೂ ಹೆಚ್ಚು ಮಂದಿ ಪದಾಧಿಕಾರಿಗಳು ರಕ್ತದಾನ ಮಾಡಿದರು.

ಜೇಸಿಐ ವಲಯ ಅಧಿಕಾರಿ ಬೈರೇಗೌಡ, ಕಾರ್ಯದರ್ಶಿ ಲೋಕೇಶ್, ಜನಾರ್ಧನ, ಕಾರ್ತಿಕ್ ಕುಮಾರ್, ಮಾಜಿ ಅಧ್ಯಕ್ಷ ಮುನಿವೆಂಕಟರಮಣಪ್ಪ, ಮಾಜಿ ಕಾರ್ಯದರ್ಶಿ ರತ್ನಮ್ಮ, ಎಸ್.ರವಿಕುಮಾರ್, ವಿ.ಕೃಷ್ಣಮೂರ್ತಿ ಪ್ರಶಾಂತ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page