back to top
24 C
Bengaluru
Friday, July 25, 2025
HomeAutoCar₹24.79 ಲಕ್ಷದ ಮಾರುತಿ Invicto ಕಾರು ಬಿಡುಗಡೆ

₹24.79 ಲಕ್ಷದ ಮಾರುತಿ Invicto ಕಾರು ಬಿಡುಗಡೆ

- Advertisement -
- Advertisement -

ಮಾರುತಿ ಸುಜುಕಿ ಇಂಡಿಯಾ ಇನ್ವಿಕ್ಟೋ (Maruti Suzuki Invicto) ಎಂಬ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ! ₹24.79 ಲಕ್ಷದಿಂದ ಆರಂಭವಾಗುವ ಈ ಕಾರು ಮೂರು ಸಾಲುಗಳ ಸೀಟ್ ಗಳನ್ನು ಹೊಂದಿದ್ದು, ಕುಟುಂಬಗಳಿಗೆ ಸೂಕ್ತವಾಗಿದೆ.

Maruti Invicto Car Launched at 24.79 lakhs

ಈಗಾಗಲೇ ತಮ್ಮ MPV ಕಾರುಗಳಿಗಾಗಿ ಬಹಳ ಜನಪ್ರಿಯವಾಗಿರುವ ಮತ್ತು ಮಾರುಕಟ್ಟೆಯಲ್ಲಿ 50% ಪಾಲನ್ನು ಹೊಂದಿರುವ ಮಾರುತಿ ಸುಜುಕಿ, ಇನ್ವಿಕ್ಟೋ ತಯಾರಿಸಲು ಟೊಯೊಟಾ ಕಿರ್ಲೋಸ್ಕರ್ (Toyota Kirloskar) ಮೋಟಾರ್ ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಅವರು Innova Hicross ಕಾರಿಗೆ ಕೆಲವು ಬದಲಾವಣೆಗಳನ್ನು ಮಾಡಿ ಮಾರುತಿ ಸುಜುಕಿಗೆ ಕೊಡುತ್ತಿದ್ದಾರೆ.

ಮಾರುತಿ ಸುಜುಕಿಯ ಸಿಇಒ ಹಿಸಾಶಿ ಟೇಕುಚಿ ಮಾತನಾಡಿ, ಗ್ರ್ಯಾಂಡ್‌ ವಿಟಾರಾ, ಫ್ರಾಂಕ್ಸ್ ಮತ್ತು ಜಿಮ್ನಿ ವಾಹನಗಳು ಎಸ್‌ಯುವಿ ಮಾರುಕಟ್ಟೆಯಲ್ಲಿ ಕಂಪನಿಯ ಪಾಲನ್ನು ಗಣನೀಯವಾಗಿ ಹೆಚ್ಚಿಸಿವೆ ಎಂದು ತಿಳಿಸಿದರು.

Maruti Invicto Car Launched at 24.79 lakhs

2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಇನ್ವಿಕ್ಟೋ ಕಾರು ಹೈಬ್ರಿಡ್ ಕೂಡ ಆಗಿದ್ದು ಇಂಧನ ಉಳಿತಾಯ ಮಾಡಲಿದೆ. ಇದು ಕೇವಲ ಒಂದು ಲೀಟರ್ ಇಂಧನದಿಂದ 23.24 ಕಿಲೋಮೀಟರ್ ದೂರ ಹೋಗಬಹುದು ಹಾಗೂ ಸುಮಾರು ಏಳು ಅಥವಾ ಎಂಟು ಜನರು ಪ್ರಯಾಣ ಮಾಡಬಹುದಾಗಿದೆ, ಆದ್ದರಿಂದ ಈ ಕಾರಿನಲ್ಲಿ ಎಲ್ಲರಿಗೂ ಸಾಕಷ್ಟು ಸ್ಥಳಾವಕಾಶವಿದೆ.

ಇನ್ವಿಕ್ಟೊ ಬಿಡುಗಡೆಯಿಂದ ಮಾರುತಿ ಸುಜುಕಿ ಕಂಪನಿಯ ಷೇರುಗಳು ಒಂದೇ ದಿನದಲ್ಲಿ 3.55% ಏರಿಕೆ ಕಂಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page