ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿದೆ ಮತ್ತು ಇದು ದೇಶದಲ್ಲಿಯೇ ಅತಿ ಹೆಚ್ಚು ಕಾರುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಈಗ ಮಾರುತಿ ಸುಜುಕಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಭಾರತದಿಂದ 30 ಲಕ್ಷ ಕಾರುಗಳನ್ನು ವಿವಿಧ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಿ ಒಂದು ಹೊಸ ದಾಖಲೆ ಸ್ಥಾಪಿಸಿದೆ.
ಮಾರುತಿ ಸುಜುಕಿ 1986 ರಲ್ಲಿ ತನ್ನ ಮೊದಲ ರಫ್ತು ಪ್ರಾರಂಭಿಸಿದಾಗ 500 ಕಾರುಗಳನ್ನು ಹಂಗೇರಿಗೆ ರಫ್ತು ಮಾಡಿತು. ನಂತರವು ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ರಫ್ತು ಮಾಡುವ ಮೂಲಕ ಸಾಧನೆಗಳನ್ನು ಹೆಚ್ಚಿಸಿದೆ. 2012-13ರಲ್ಲಿ ಮೊದಲ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಬಳಿಕ, 20 ಲಕ್ಷ ಕಾರುಗಳ ರಫ್ತು 2020ರಲ್ಲಿ ಮೈಲಿಗಲ್ಲನ್ನು ಸಾಧಿಸಿಕೊಂಡಿತು.
ಮಾರುತಿ ಸುಜುಕಿ ಕಂಪನಿಯು ಸೆಲೆರಿಯೊ, ಫ್ರಾಂಕ್ಸ್, ಬಲೆನೊ, ಸಿಯಾಜ್, ಡಿಸೈರ್ ಮತ್ತು ಎಸ್ಪ್ರೆಸೊದಂತಹ ಜನಪ್ರಿಯ ಮಾದರಿಗಳನ್ನು ರಫ್ತು ಮಾಡುತ್ತಿದೆ. ಮಾರುತಿ ಸುಜುಕಿ ಕಂಪನಿಯು ಮುಖ್ಯವಾಗಿ ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೇರಿಕಾ ಮತ್ತು ಪಶ್ಚಿಮ ಏಷ್ಯಾದಾದ್ಯಂತ ರಾಷ್ತೃಗಳಿಗೆ ರಫ್ಟು ಮಾಡುತ್ತಿದ್ದಾರೆ. ಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ ಮತ್ತು ಚಿಲಿಯಂತಹ ದೇಶಗಳು ಸುಜುಕಿ ಬ್ಯಾಡ್ಜ್ ಅಡಿಯಲ್ಲಿ ವಾಹನಗಳನ್ನು ಸ್ವೀಕರಿಸುತ್ತವೆ.
ಇತ್ತೀಚೆಗೆ, ಮಾರುತಿ ಸುಜುಕಿ ತನ್ನ ರಫ್ತು ಪಟ್ಟಿಗೆ ಗ್ರಾಂಡ್ ವಿಟಾರಾ ಮತ್ತು ಜಿಮ್ಮಿಯನ್ನು ಸೇರಿಸಿತ್ತು. ಇದೇ ವೇಳೆ, ಎಲೆಕ್ಟ್ರಿಕ್ SUV ಇ ವಿಟಾರಾ ಕಾರನ್ನು ಪರಿಚಯಿಸಲು ನಿರ್ಧರಿಸಲಾಗಿದೆ.
ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರುಗಳು 49 kWh ಮತ್ತು 61 kWh ಬ್ಯಾಟರಿ ಆಯ್ಕೆಯೊಂದಿಗೆ ಬರುವುದರಿಂದ, ಇದರ ಶಕ್ತಿಯು ಹೆಚ್ಚಿನ ವ್ಯತ್ಯಾಸವನ್ನು ತಲುಪಿದೆ.