
ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಮಾಸ್ಟರ್ಸ್ ಲೀಗ್ (Masters League) ಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕರತ್ವದಲ್ಲಿ ಭಾರತ ಮಾಸ್ಟರ್ಸ್ ತಂಡ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ಕನ್ನಡಿಗ ವಿನಯ್ ಕುಮಾರ್ ಬೌಲಿಂಗ್ ದಾಳಿಗೆ ತತ್ತರಿಸಿ 148 ರನ್ ಗಳಿಸಿತು. ವಿಂಡೀಸ್ ಪರ ಡ್ವೆನ್ ಸ್ಮಿತ್ 48 ಮತ್ತು ಲೆಂಡಲ್ ಸಿಮೋನ್ಸ್ 57 ರನ್ ಸಿಡಿಸಿದರು.